ಬುಧವಾರ, ಫೆಬ್ರವರಿ 26, 2020
19 °C
ಪುಲ್ವಾಮಾ ದಾಳಿಯ ಸಂಚುಕೋರ

ಮಸೂದ್ ಅಜರ್‌ಗೆ ನಿಷೇಧ ಹೇರುವಂತೆ ಒತ್ತಾಯ: ವಿಶ್ವಸಂಸ್ಥೆಗೆ ಫ್ರಾನ್ಸ್ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪುಲ್ವಾಮಾ ದಾಳಿಯ ಸಂಚುಕೋರ ಮಸೂದ್ ಅಜರ್‌ಗೆ ನಿಷೇಧ ಹೇರುವಂತೆ ಒತ್ತಾಯಿಸಿ ವಿಶ್ವಸಂಸ್ಥೆಯಲ್ಲಿ ಫಾನ್ಸ್ ಕೆಲವೇ ದಿನಗಳಲ್ಲಿ ಪ್ರಸ್ತಾವ ಮಂಡಿಸಲಿದೆ. 

2017ರಲ್ಲಿಯೂ ಫ್ರಾನ್ಸ್‌ ಒಮ್ಮೆ ಇಂತಹದ್ದೇ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಮುಂದಿಟ್ಟಿತ್ತು.

ಇಂಗ್ಲೆಂಡ್ ಮತ್ತು ಫ್ರಾನ್ಸ್ ಬೆಂಬಲದೊಂದಿಗೆ ಅಮೆರಿಕ ಇಟ್ಟಿದ್ದ ಮತ್ತೊಂದು ಪ್ರಸ್ತಾವಕ್ಕೆ ಚೀನಾ ತಡೆಯೊಡ್ಡಿತ್ತು. 

ಪ್ರಧಾನಿಯವರ ರಕ್ಷಣಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಫ್ರಾನ್ಸ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಫಿಲಿಪ್ ಎಟಿನ್ನೆ ಅವರು ಈ ಬಗ್ಗೆ ಮಂಗಳವಾರ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು