ಗುರುವಾರ , ಜುಲೈ 29, 2021
25 °C

ಗಾಲ್ವನ್ ಕಣಿವೆ ಸಂಘರ್ಷ | ಭಾರತೀಯ ಸೈನಿಕರ ಮೇಲೆ ಮುಳ್ಳುಗದೆಯಿಂದ ದಾಳಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಗಾಲ್ವನ್ ಬಡಿದಾಟದ ವೇಳೆ ಚೀನಾ ಸೈನಿಕರು ತೋರಿದ ಕ್ರೌರ್ಯವು ಭಾರತೀಯ ಸೈನಿಕರಿಗೆ ಆಘಾತವನ್ನು ಉಂಟು ಮಾಡಿತ್ತು. ಹೀಗಾಗಿ ವಾಸ್ತವ ಗಡಿ ರೇಖೆಯಲ್ಲಿ ಗಸ್ತು ತಂತ್ರವನ್ನೇ ಬದಲಿಸುವ ಬಗ್ಗೆ ಭಾರತೀಯ ಸೇನೆ ಚಿಂತನೆ ನಡೆಸಿದೆ.

ಚೀನಾ ಸೈನಿಕರು ಭಾರತದ ಸೈನಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಆದರೆ, ಅದಕ್ಕಿಂತಲೂ ಅವರು ಬಡಿದಾಟಕ್ಕೆ ಬಳಸಿದ ತಂತ್ರ ಮತ್ತು ಆಯುಧಗಳು ಭೀಕರವಾಗಿದ್ದವು. ಅವರು ಮುಳ್ಳುಗದೆಯಿಂದ ದಾಳಿ ನಡೆಸಿದ್ದರು. ಮೊಳೆ ಹೊಡೆದಿದ್ದ ದೊಣ್ಣೆಗಳಿಂದ ಭಾರತೀಯ ಸೈನಿಕರಿಗೆ ಬಡಿದಿದ್ದರು. ಬಡಿದಾಟದ ವೇಳೆ ಭಾರತೀಯ ಸೈನಿಕರನ್ನು ಬೆಟ್ಟದ ಮೇಲಿಂದ ತಳ್ಳುವ ಕ್ರೌರ್ಯವನ್ನೂ ತೋರಿದ್ದರು ಎಂದು ಮೂಲಗಳು ಹೇಳಿವೆ.

ಈವರೆಗೆ ಎಲ್‌ಎಸಿಯಲ್ಲಿ ಗಸ್ತು ತಿರುಗುವಾಗ ಭಾರತೀಯ ಸೈನಿಕರು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುತ್ತಿರಲಿಲ್ಲ. ಇನ್ನುಮುಂದೆ ಶಸ್ತ್ರಾಸ್ತ್ರವನ್ನೂ ಕೊಂಡೊಯ್ಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು