ಭಿಲಾಯಿ ಉಕ್ಕು ಘಟಕದಲ್ಲಿ ಅನಿಲ ಪೈಪ್‍ಲೈನ್ ಸ್ಫೋಟ: 6 ಸಾವು 

7

ಭಿಲಾಯಿ ಉಕ್ಕು ಘಟಕದಲ್ಲಿ ಅನಿಲ ಪೈಪ್‍ಲೈನ್ ಸ್ಫೋಟ: 6 ಸಾವು 

Published:
Updated:

ಛತ್ತೀಸ್‍ಗಡ: ಇಲ್ಲಿನ ಭಿಲಾಯಿ ಉಕ್ಕು ಘಟಕದಲ್ಲಿ ಮಂಗಳವಾರ ಮಧ್ಯಾಹ್ನ ಅನಿಲ ಪೈಪ್‍ ಲೈನ್ ಸ್ಫೋಟಗೊಂಡು 6 ಮಂದಿ ಸಾವಿಗೀಡಾಗಿದ್ದಾರೆ. 14 ಮಂದಿಗೆ ಗಾಯಗಳಾಗಿವೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಯ್ಪುರ್‌ನಿಂದ 20 ಕಿಮೀ ದೂರದಲ್ಲಿರುವ ಭಿಲಾಯಿ ನಗರದಲ್ಲಿ ಕೋಕ್  ಓವನ್  ಸ್ಟೇಷನ್ ಬಳಿ ಇರುವ ಪೈಪ್‍ಲೈನಲ್ಲಿ ಈ ಸ್ಫೋಟ  ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

 ಘಟನಾ ಸ್ಥಳಕ್ಕೆ ಪೊಲೀಸ್ ಮತ್ತು ರಕ್ಷಣಾ ಪಡೆ ದೌಡಾಯಿಸಿದ್ದು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಗೆ ಸೇರಿದ ಉಕ್ಕಿನ ಘಟಕವಾಗಿದೆ ಇದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !