ಶುಕ್ರವಾರ, ಸೆಪ್ಟೆಂಬರ್ 20, 2019
28 °C

ದಾದರ್ ಪೊಲೀಸ್ ಠಾಣೆಯ ಆವರಣದಲ್ಲಿ ಅಗ್ನಿ ಅವಘಡ: ಬಾಲಕಿ ಸಾವು

Published:
Updated:

ಮುಂಬೈ: ದಾದರ್ ಪೊಲೀಸ್ ಠಾಣೆಯ ಆವರಣದಲ್ಲಿರುವ ಸೈತಾನ್ ಚೌಕಿ ಪೊಲೀಸ್ ನಿವಾಸ ಸ್ಥಳದಲ್ಲಿ ಬೆಂಕಿ ಅವಘಡ ಸಂಭವಿಸಿ 15ರ ಹರೆಯದ ಬಾಲಕಿಯೊಬ್ಬಳು ಸಾವಿಗೀಡಾದ ಘಟನೆ ನಡೆದಿದೆ.

 ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಅಗ್ನಿಶಾಮಕ ದಳದ 4 ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿವೆ.

 5 ಮಹಡಿಯ ಕಟ್ಟಡದ ಮೂರನೇ ಮಹಡಿಯಲ್ಲಿ ಭಾನುವಾರ ಮಧ್ಯಾಹ್ನ 1.45ಕ್ಕೆ ಬೆಂಕಿ ಕಾಣಿಸಿಕೊಂಡಿಸಿತ್ತು. ಈ ಬೆಂಕಿಗೆ ವಿದ್ಯುತ್ ಉಪಕರಣ, ಗೃಹೋಪಕರಣಗಳು ಸುಟ್ಟು ಬೂದಿಯಾಗಿವೆ.

ಅಗ್ನಿ ಅವಘಡ ಸಂಭವಿಸಲು ಕಾರಣ ಏನೆಂದು ಇದುವರೆಗೆ ತಿಳಿದು ಬಂದಿಲ್ಲ.

 

Post Comments (+)