ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನ ನಿಷೇಧಕ್ಕೆ ಮಸೂದೆ

ನವದೆಹಲಿ: ದೇಶದಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ತಾಯ್ತನ ಸೌಲಭ್ಯ ಬಳಕೆ ಮಾಡುವುದನ್ನು ಶೀಘ್ರವೇ ನಿಷೇಧಗೊಳಿಸಲು ಕೇಂದ್ರ ಸಿದ್ಧವಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಅವರು ಸೋಮವಾರ ಲೋಕಸಭೆಯಲ್ಲಿ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, 2019 ಮಂಡಿಸಿದ್ದಾರೆ.
ಮಸೂದೆಯ ಅನ್ವಯ, ಮಕ್ಕಳಿಲ್ಲದ ದಂಪತಿಯ ಆಪ್ತ ಸಂಬಂಧಿಕರಿಗೆ ಮಾತ್ರ ಬಾಡಿಗೆ ತಾಯಂದಿರಾಗಲು ಅನುಮತಿ ನೀಡಲಾಗುತ್ತದೆ. ದೇಶ ಮತ್ತು ರಾಜ್ಯ ಮಟ್ಟದಲ್ಲಿ ಬಾಡಿಗೆ ತಾಯ್ತನ ಮಂಡಳಿಗಳನ್ನು ರಚಿಸಲು ಶಿಫಾರಸು ಮಾಡಲಾಗಿದೆ.
‘ಕಾನೂನುಬದ್ಧ ವಿವಾಹವಾಗಿ ಕನಿಷ್ಠ ಐದು ವರ್ಷವಾಗಿರುವ ಭಾರತೀಯ ದಂಪತಿ, ಬಾಡಿಗೆ ತಾಯ್ತನ ಸೌಲಭ್ಯ ಪಡೆಯಲು ಅರ್ಹರು. ಬಾಡಿಗೆ ತಾಯಿಯಾಗುವ ಮಹಿಳೆ, ಆ ದಂಪತಿಯ ಆಪ್ತ ಸಂಬಂಧಿಕರಾಗಿರಬೇಕು ಮತ್ತು ಅದಾಗಲೇ ಮದುವೆಯಾಗಿ ಸ್ವಂತ ಮಗುವನ್ನು ಹೊಂದಿರಬೇಕು. ಒಂದು ಮಹಿಳೆಗೆ ಒಂದು ಬಾರಿ ಮಾತ್ರ ಬಾಡಿಗೆ ತಾಯಿಯಾಗಲು ಅವಕಾಶ’ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
‘ಕಳೆದ ಕೆಲವು ವರ್ಷಗಳಿಂದ ವಿದೇಶಿಗರಿಗೆ ಭಾರತ ಬಾಡಿಗೆ ತಾಯ್ತನ ಕೇಂದ್ರವಾಗಿ ಮಾರ್ಪಾಡಾಗಿದೆ. ಬಾಡಿಗೆ ತಾಯ್ತನ ನಿಯಂತ್ರಣಕ್ಕೆ ಸೂಕ್ತ ಕಾನೂನು ಇಲ್ಲದಿರುವುದರಿಂದ ವೈದ್ಯಕೀಯ ಕೇಂದ್ರಗಳು ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.