ಭಾನುವಾರ, ಜನವರಿ 19, 2020
25 °C

ಪೌರತ್ವ ಕಾಯ್ದೆ ಜಾರಿ ನಿರ್ಧಾರದಿಂದ ಒಂದಿಂಚೂ ಅಲುಗುವ ಮಾತಿಲ್ಲ: ಶಾ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಧಪುರ (ರಾಜಸ್ಥಾನ): ‘ವಿರೋಧಗಳೇನೇ ಇದ್ದರೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ನಿರ್ಧಾರದಿಂದ ಸರ್ಕಾರ ಒಂದಿಂಚೂ ಹಿಂದೆ ಸರಿಯುವುದಿಲ್ಲ,’ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಅಮಿತ್‌ ಶಾ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. 

ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಸಮಾವೇಶಕ್ಕೆ ಜೋಧಪುರದಲ್ಲಿ ಚಾಲನೆ ನೀಡಿದ ಅವರು, ‘ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ಕಾಯ್ದೆ ಬಗ್ಗೆ ದೇಶದಲ್ಲಿ ಅಪಪ್ರಚಾರ ನಡೆಸುತ್ತಿವೆ,’ ಎಂದು ಆರೋಪಿಸಿದರು. 

‘ಪೌರತ್ವ ಕಾಯ್ದೆ ದೇಶದ ಯಾವೊಬ್ಬ ನಾಗರಿಕರ ಪೌರತ್ವವನ್ನೂ ಕಸಿಯುವುದಿಲ್ಲ. ಬದಲಾಗಿ ಪೌರತ್ವ ನೀಡುತ್ತದೆ,’ ಎಂದು ಅವರು ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು