ಬುಧವಾರ, ಜುಲೈ 15, 2020
22 °C

ಜಿಎಸ್‌ಟಿ: ಕೇಂದ್ರದಿಂದ ಆದಾಯ ನಷ್ಟ ಪರಿಹಾರ; ರಾಜ್ಯಕ್ಕೆ ₹4,313 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ಅನ್ವಯ ಆದಾಯ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರವು ಶುಕ್ರವಾರ ರಾಜ್ಯಕ್ಕೆ ₹4,313.13 ಕೋಟಿ ನೆರವನ್ನು ಬಿಡುಗಡೆ ಮಾಡಿದೆ.

2019ರ ಡಿಸೆಂಬರ್‌ನಿಂದ 2020ರ ಫೆಬ್ರುವರಿ ಅವಧಿಯಲ್ಲಿ ಕರ್ನಾಟಕ ಎದುರಿಸಿರುವ ಆದಾಯ ನಷ್ಟದ ಪರಿಹಾರ ರೂಪದಲ್ಲಿ ಈ ನೆರವನ್ನು ಒದಗಿಸಲಾಗಿದೆ ಎಂದು ಕೇಂದ್ರದ ಹಣಕಾಸು ಸಚಿವಾಲಯದ ಆದೇಶ ತಿಳಿಸಿದೆ.

2017ರ ಜುಲೈ 1ರಂದು ಜಾರಿಯಾದ ಜಿಎಸ್‌ಟಿ ಕಾಯ್ದೆಯ ಅನ್ವಯ ಕೇಂದ್ರವು ಐದು ವರ್ಷಗಳ ಕಾಲ ರಾಜ್ಯಗಳಿಗೆ ಈ ನಷ್ಟ ಪರಿಹಾರ ಒದಗಿಸಲಿದೆ. ಕೊರೊನಾ ತಡೆ ನಿಟ್ಟಿನಲ್ಲಿ ಘೋಷಿಸಲಾದ ಲಾಕ್‌ಡೌನ್‌ನಿಂದ ಆದಾಯದಲ್ಲಿ ನಷ್ಟ ಅನುಭವಿಸಿರುವ ರಾಜ್ಯ ಸರ್ಕಾರಗಳಿಗೆ ಈ ಪರಿಹಾರ ಬಿಡುಗಡೆ ಮಾಡಿದ್ದರಿಂದ ಅನುಕೂಲವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು