ಬುಧವಾರ, ಏಪ್ರಿಲ್ 8, 2020
19 °C

ಗುರುವಾಯೂರು ದೇವಸ್ಥಾನದ ಆನೆ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ತ್ರಿಶೂರ್ : ಗುರುವಾಯೂರು ದೇವಸ್ಥಾನದ ಆಕರ್ಷಣೆಗಳಲ್ಲೊಂದಾಗಿದ್ದ ಆನೆ ‘ಗುರುವಾಯೂರು ಪದ್ಮನಾಭನ್’ (84)  ಬುಧವಾರ ಮಧ್ಯಾಹ್ನ ನಿಧನ ಹೊಂದಿದೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

‘ಭಗವಾನ್ ಕೃಷ್ಣನ ಸಣ್ಣ ವಿಗ್ರಹವನ್ನು ಹೊತ್ತೊಯ್ಯುತ್ತಿದ್ದ ಈ ಆನೆಯು ನೋಡಲು ಆಕರ್ಷಕವಾಗಿದ್ದ ಕಾರಣ, ಇದನ್ನು ‘ಗಜರತ್ನಂ’ ಎಂದೇ ಕರೆಯಲಾಗುತ್ತಿತ್ತು. ದಶಕಗಳ ಕಾಲ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಈ ಆನೆ ಬುಧವಾರ ಮಧ್ಯಾಹ್ನ 2.10ಕ್ಕೆ ಸಾವನ್ನಪ್ಪಿತು’ ಎಂದು ಗುರುವಾಯೂರು ದೇವಸ್ಥಾನದ ಅಧ್ಯಕ್ಷ ಕೆ.ಬಿ. ಮೋಹನ್‌ದಾಸ್ ಹೇಳಿದ್ದಾರೆ. 

ಕೆಲ ವಾರಗಳಿಂದ ಆನೆಯ ಮೈ ಊದಿಕೊಂಡಿತ್ತು. ಇದಕ್ಕಾಗಿ ಆನೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ‘ಪದ್ಮನಾಭನ್’  ನಿಧನದಿಂದ ದೇವಸ್ಥಾನದಲ್ಲಿರುವ ಆನೆಗಳ ಸಂಖ್ಯೆ 47ಕ್ಕೆ ಇಳಿದಿದೆ. ‘ಪದ್ಮನಾಭನ್’ ತ್ರಿಶೂರ್ ಪೂರ್ಣಂ ಸೇರಿದಂತೆ ಅನೇಕ ದೇಗುಲಗಳ ಉತ್ಸವದಲ್ಲಿ ಪಾಲ್ಗೊಂಡಿತ್ತು. 2004ರಲ್ಲಿ ಪಾಲಕ್ಕಾಡ್‌ ಜಿಲ್ಲೆಯಲ್ಲಿ ನಡೆದ ನೆನ್ಮರ–ವೆಲ್ಲಂಗಿ ವೇಳಾ ಹಬ್ಬದಲ್ಲಿ ಈ ಆನೆ ₹ 2.22 ಲಕ್ಷ ಸಂಭಾವನೆ ಪಡೆದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು