ಬೆಂಗಳೂರು: ಖ್ಯಾತ ವಸ್ತ್ರ ವಿನ್ಯಾಸಕ ವೆಂಡೆಲ್ ರಾಡ್ರಿಕ್ಸ್ ಅವರ ನಿಧನಕ್ಕೆ ಬಾಲಿವುಡ್ ತಾರೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

‘ಮಾಡೆಲಿಂಗ್‌ಗಾಗಿ ಬೆಂಗಳೂರಿನಿಂದ ಮುಂಬೈಗೆ ಹೋಗಲು ನನಗೆ ಪ್ರೇರಣೆ ನೀಡಿದ್ದೇ ರಾಡ್ರಿಕ್ಸ್,’ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಕುರಿತು ಅವರು ಸಾಮಾಜಿಕ ತಾಣ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ‘ವಸ್ತ್ರ ವಿನ್ಯಾಸಕ ವೆಂಡೆಲ್ ರಾಡ್ರಿಕ್ಸ್ ಅವರು ಚಿರನಿದ್ರೆಗೆ ಜಾರಿದರೆಂಬ ಕೆಟ್ಟ ಸುದ್ದಿಯೊಂದಿಗೆ ನಾನಿಂದು ಎಚ್ಚರಗೊಂಡೆ. ಅವರೊಬ್ಬ ಅಪ್ರತಿಮ, ಅಪ್ಪಟ ವಸ್ತ್ರ ವಿನ್ಯಾಸಕ. ಲೈಂಗಿಕ ಅಲ್ಪಸಂಖ್ಯಾತರ (ಎಲ್‌ಜಿಬಿಟಿ) ಪರವಾಗಿ ದನಿ ಎತ್ತಿದವರು. ಬೆಂಗಳೂರಿನಲ್ಲಿ ನನ್ನನ್ನು ನೋಡಿದ್ದ ರಾಡ್ರಿಕ್ಸ್ ಮುಂಬೈನಲ್ಲಿ ನಡೆಯುತ್ತಿದ್ದ ಫ್ಯಾಷನ್ ವೀಕ್‌ಗೆ ಪರಿಚಯಿಸಿದ್ದರು. ಅವರದ್ದು ಅತ್ಯಂತ ಪ್ರೋತ್ಸಾಹಕ ವ್ಯಕ್ತಿತ್ವ. ಕೇವಲ 18ನೇ ವಯಸ್ಸಿಗೇ ಮಾಡೆಲಿಂಗ್‌ನಲ್ಲಿ ನಾನು ತೊಡಗಿಸಿಕೊಳ್ಳಲು, ಅದಕ್ಕಾಗಿ ಬೆಂಗಳೂರಿನಿಂದ ಮುಂಬೈಗೆ ಹೋಗಲು ಧೈರ್ಯ ತುಂಬಿದ್ದೇ ರಾಡ್ರಿಕ್ಸ್,’ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.