ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೃದಯವಿದ್ರಾವಕ’: ವಿಶಾಖಪಟ್ಟಣ ಅನಿಲ ದುರಂತಕ್ಕೆ ಕ್ರೀಡಾಲೋಕದ ಪ್ರತಿಕ್ರಿಯೆ

ಅಕ್ಷರ ಗಾತ್ರ

ಆಂಧ್ರ ಪ್ರದೇಶದ ವಿಶಾಖಪಟ್ಟಣ ಸಮೀಪ ಕಾರ್ಖಾನೆಯಿಂದ ರಾಸಾಯನಿಕ ಸೋರಿಕೆಯಾಗಿ ಗುರುವಾರ ಸಂಭವಿಸಿದದುರಂತಕ್ಕೆ ಕ್ರೀಡಾಲೋಕ ಖೇದ ವ್ಯಕ್ತಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಬಹುತೇಕ ಕ್ರೀಡಾಪಟುಗಳು ‘ಹೃದಯ ವಿದ್ರಾವಕ ಘಟನೆಯಿದು’ ಎಂದು ಹೇಳಿದ್ದಾರೆ. ದುರಂತದಲ್ಲಿ ಈವರೆಗೆ 11 ಮಂದಿ ಮೃತಪಟ್ಟಿದ್ದಾರೆ. 1000 ಮಂದಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

‘ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಅಸ್ವಸ್ಥರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ’ ಎಂದು ಕ್ರಿಕೆಟ್ ತಂಡದ ನಾಯಕವಿರಾಟ್‌ ಕೊಹ್ಲಿ ಹೇಳಿದ್ದಾರೆ.

‘ವೈಝಾಗ್‌ ದುರಂತ ದುರಾದೃಷ್ಟದ ಸಂಗತಿ. ಎಲ್ಲ ಬಾಧಿತರ ಬಗ್ಗೆ ವಿಷಾದಿಸುವೆ. ಸಂತ್ರಸ್ಥ ಕುಟುಂಬಗಳಿಗೆ ಶಕ್ತಿ ಸಿಗಲಿ’ ಎಂದು ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಟ್ವೀಟ್ ಮಾಡಿದ್ದಾರೆ.

ವಿಶಾಖಪಟ್ಟಣದಲ್ಲಿ ಎರಡು ರಣಜಿ ಟ್ರೋಫಿ ಋತುಮಾನ ಕಳೆದಿದ್ದೇನೆ. ಅದು ನನ್ನ ಹೃದಯಕ್ಕೆ ಹತ್ತಿರವಾದ ನಗರ. ಅಲ್ಲಿಂದ ಬರುತ್ತಿರುವ ಸುದ್ದಿ ನನ್ನ ಎದೆಯನ್ನು ಕಲಕಿದೆ ಎಂದು ಹಿರಿಯ ಕ್ರಿಕೆಟಿಗ ಮೊಹಮದ್ ಕೈಫ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT