ಶನಿವಾರ, ಡಿಸೆಂಬರ್ 7, 2019
24 °C

ಹಿಜ್ಬುಲ್ ಸಂಘಟನೆಯ ಉಗ್ರ ರಿಯಾಜ್ ಅಹ್ಮದ್ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು: ಮೋಸ್ಟ್ ವಾಂಟೆಡ್ ಉಗ್ರ, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯ ರಿಯಾಜ್ ಅಹ್ಮದ್ ಎಂಬಾತನನ್ನು ಜಮ್ಮು ಕಾಶ್ಮೀರ ಪೊಲೀಸರು ಕಿಶ್ತ್ವಾರ್ ನಗರದಲ್ಲಿ ಭಾನುವಾರ ಬಂಧಿಸಿದ್ದಾರೆ.

ಈತ ಹಿಜ್ಬುಲ್ ಉಗ್ರ ಮೊಹಮ್ಮದ್ ಅಮೀನ್‍ನ ಆಪ್ತನಾಗಿದ್ದಾನೆ ಎಂದು ಮೂಲಗಳು ಹೇಳಿವೆ. ಜುಲೈ 1ರಂದು ಕಿಶ್ತ್ವಾರ್‌ನಲ್ಲಿ ಇಬ್ಬರು ಉಗ್ರರನ್ನು ಬಂಧಿಸಿದ ಪೊಲೀಸರು ಅವರಿಂದ ಆಯುಧಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಮೋಸ್ಟ್ ವಾಂಟೆಂಡ್ ಉಗ್ರನಾಗಿದ್ದಾನೆ ರಿಯಾಜ್.

ಯುವಕರನ್ನು ಉಗ್ರ ಸಂಘಟನೆಗೆ ಸೇರುವಂತೆ ಪ್ರೋತ್ಸಾಹಿಸುತ್ತಿದ್ದ ರಿಯಾಜ್‍ನ್ನು 2016ರಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದ ಬಂಧಮುಕ್ತನಾಗಿದ್ದ ಈತ ತಲೆಮರೆಸಿಕೊಂಡಿದ್ದ ಎಂದು ಮೂಲಗಳು ಹೇಳಿವೆ.
ರಿಯಾಜ್ ಎಕೆ ರೈಫಲ್ ಹಿಡಿದುಕೊಂಡು ನಿಂತಿರುವ ಹಲವಾರು ಚಿತ್ರಗಳು ಇತ್ತೀಚೆಗೆ ವೈರಲ್ ಆಗಿತ್ತು ಎಂದು ಕಿಶ್ತ್ವಾರ್‌ ನ ಹಿರಿಯ ಪೊಲೀಸ್ ಅಧಿಕಾರಿ ರಾಜೇಂದ್ರ ಗುಪ್ತಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಶ್ರೀನಗರದ ಪರಿಂಪೊರಾದಲ್ಲಿನ ಭಯೋತ್ಪಾದನಾ ಕೃತ್ಯದಲ್ಲಿಯೂ ರಿಯಾಜ್ ಭಾಗಿಯಾಗಿದ್ದನು ಎಂದಿದ್ದಾರೆ ಗುಪ್ತಾ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು