ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,143 ಐಎಎಸ್‌ ಅಧಿಕಾರಿಗಳು ಸರ್ಕಾರಕ್ಕೆ ಅಪ್ರಯೋಜಕರು!

Last Updated 26 ಏಪ್ರಿಲ್ 2019, 19:47 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ 1,100ಕ್ಕೂ ಹೆಚ್ಚು ಐಎಎಸ್‌ ಅಧಿಕಾರಿಗಳು ಸರ್ಕಾರದ ಪಾಲಿಗೆ ಅಪ್ರಯೋಜಕರು.

ಕಾರ್ಯದಕ್ಷತೆ ಸಂಬಂಧಿಸಿದಂತೆ 25 ವರ್ಷ ಸೇವಾವಧಿ ಪೂರೈಸಿದ ಅಥವಾ 50 ವರ್ಷ ವಯೋಮಿತಿ ದಾಟಿದ ಅಧಿಕಾರಿಗಳ ಸೇವಾ ದಾಖಲೆ ಪರಿಶೀಲಿಸಿದಾಗ ಈ ಅಂಶ ಗೊತ್ತಾಗಿದೆ. 1,143 ಅಧಿಕಾರಿಗಳು ಅನುತ್ಪಾದಕರ ಸಾಲಿಗೆ ಸೇರಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಅವರಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಮೂರು ತಿಂಗಳ ಮೊದಲು ನೋಟಿಸ್‌ ನೀಡಲು ನಿಯಮದಲ್ಲಿ ಅವಕಾಶವಿದೆ. ಈ ರೀತಿ ಛತ್ತೀಸ್‌ಗಡ ಕೇಡರ್‌ನ ನಾಲ್ಕು, ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಬಿಹಾರದ ತಲಾ ಒಬ್ಬೊಬ್ಬ ಅಧಿಕಾರಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT