ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಲಕ್ಷಣ ಇರುವವರಿಗೆ ಕಡ್ಡಾಯ ತಪಾಸಣೆ

ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಐಸಿಎಂಆರ್ ಸೂಚನೆ
Last Updated 24 ಜೂನ್ 2020, 13:22 IST
ಅಕ್ಷರ ಗಾತ್ರ

ನವದೆಹಲಿ:ಕೋವಿಡ್–19 ರೋಗಲಕ್ಷಣ ಇರುವ ಎಲ್ಲರನ್ನೂ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ತಪಾಸಣೆಗಳ ಸಂಖ್ಯೆಯನ್ನು ಹೆಚ್ಚಿಸಿ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಸೂಚಿಸಿದೆ. ಕೋವಿಡ್ ತಪಾಸಣೆಗೆ ಈ ಮೊದಲು ರೂಪಿಸಿದ್ದ ಮಾರ್ಗಸೂಚಿಗಳನ್ನು ಐಸಿಎಂಆರ್ ಬದಲಿಸಿದೆ.

‘ಕೋವಿಡ್ ಹರಡುವುದನ್ನು ತಡೆಯಲು, ‘ತಪಾಸಣೆ, ಪತ್ತೆ ಮತ್ತು ಚಿಕಿತ್ಸೆ’ ವಿಧಾನ ಮಾತ್ರವೇ ಪರಿಣಾಮಕಾರಿ. ಹೀಗಾಗಿ ದೇಶದ ಮೂಲೆಮೂಲೆಯಲ್ಲೂ, ರೋಗದ ಲಕ್ಷಣ ಇರುವ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ಇವರನ್ನು ಆ್ಯಂಟಿಬಾಡಿ ತಪಾಸಣೆ ಮತ್ತು ಅಗತ್ಯವಿದ್ದಲ್ಲಿ ಆರ್‌ಟಿಪಿಸಿಆರ್‌ ತಪಾಸಣೆಗೂ ಒಳಪಡಿಸಬೇಕು’ ಎಂದು ಐಸಿಎಂಆರ್ ಹೇಳಿದೆ.

ಮೇ 18ರಂದು ಹೊರಡಿಸಿದ್ದ ಮಾರ್ಗಸೂಚಿಯಲ್ಲಿ, ‘ಶೀತಜ್ವರ ಲಕ್ಷಣ ಇರುವವರು ಮತ್ತು ಹೊರರಾಜ್ಯಗಳಿಂದ ಹಿಂದಿರುಗಿದ ವಲಸೆ ಕಾರ್ಮಿಕರಲ್ಲಿ ಲಕ್ಷಣ ಕಾಣಿಸಿಕೊಂಡ 7 ದಿನಗಳ ಒಳಗೆ ತಪಾಸಣೆ ನಡೆಸಬೇಕು’ ಎಂದು ಸೂಚಿಸಲಾಗಿತ್ತು.

‘ಕೋವಿಡ್‌ನ ಕಾರಣ ಆಸ್ಪತ್ರೆಗೆ ದಾಖಲಾಗಿರುವವರಲ್ಲಿ,ಹಾಟ್‌ಸ್ಪಾಟ್‌ಗಳಲ್ಲಿ ಇರುವವರಲ್ಲಿ ಮತ್ತು ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಲ್ಲಿಶೀತಜ್ವರದಂತಹ ಲಕ್ಷಣಗಳು ಕಾಣಿಸಿಕೊಂಡರೆ ಅವರನ್ನು ತಕ್ಷಣವೇ ತಪಾಸಣೆಗೆ ಒಳಪಡಿಸಬೇಕು. ಸಂಬಂಧಿತ ದತ್ತಾಂಶವನ್ನು ಐಸಿಎಂಆರ್‌ನ ಕೋವಿಡ್ ಪೋರ್ಟಲ್‌ನಲ್ಲಿ ದಾಖಲಿಸಬೇಕು’ ಎಂದು ಆದೇಶಿಸಲಾಗಿದೆ.

ಸಮುದಾಯದಲ್ಲಿ ಪ್ರತಿರೋಧಕ ಶಕ್ತಿ

ಲಂಡನ್ (ಪಿಟಿಐ): ಸಮುದಾಯ ಮಟ್ಟದಲ್ಲಿ ಕೋವಿಡ್‌ಗೆ ಪ್ರತಿರೋಧಕ ಶಕ್ತಿ ರೂಪುಗೊಳ್ಳಲು ಈ ಮೊದಲು ಊಹಿಸಿದ್ದಕ್ಕಿಂತ ಕಡಿಮೆ ಪ್ರಮಾಣದ ಜನರಿಗೆ ಸೋಂಕು ತಗುಲಿದರೆ ಸಾಕು ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಶೇ 60ರಷ್ಟು ಜನರಿಗೆ ಸೋಂಕು ತಗುಲಿದರೆ, ಸಮುದಾಯ ಮಟ್ಟದಲ್ಲಿ ಕೋವಿಡ್‌ಗೆ ಪ್ರತಿರೋಧ ಶಕ್ತಿ ರೂಪುಗೊಳ್ಳುತ್ತದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಈಗ ಶೇ 43ರಷ್ಟು ಜನರಿಗೆ ಸೋಂಕು ತಗುಲಿದರೆ, ಸಮುದಾಯಮಟ್ಟದಲ್ಲಿ ಕೋವಿಡ್‌ಗೆ ಪ್ರತಿರೋಧ ಶಕ್ತಿ ರೂಪುಗೊಳ್ಳುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.ಸೋಂಕಿಗೆ ತುತ್ತಾಗುವ ಸಂಭಾವ್ಯ ವ್ಯಕ್ತಿಗಳ ವಯಸ್ಸು ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಆಧರಿಸಿ ಬ್ರಿಟನ್‌ನ ನಾಟಿಂಗ್‌ಹ್ಯಾಂ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನದ ಆಧಾರದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಸಮುದಾಯದಲ್ಲಿನ ಹೆಚ್ಚಿನ ಜನರಿಗೆ ಸೋಂಕು ಹರಡಿದರೆ, ಅವರಲ್ಲೇ ಪ್ರತಿರೋಧಕ ಶಕ್ತಿ ರೂಪುಗೊಳ್ಳುತ್ತದೆ. ಎಲ್ಲರಲ್ಲಿಯೂ ಈ ಶಕ್ತಿ ರೂಪುಗೊಳ್ಳುವುದರಿಂದ ಸೋಂಕು ಹರಡುವಿಕೆ ನಿಧಾನವಾಗುತ್ತದೆ. ಹೆಚ್ಚು ಜನರಲ್ಲಿ ಈ ಶಕ್ತಿ ರೂಪುಗೊಂಡರೆ ಸೋಂಕು ಹರಡುವಿಕೆಯ ಸರಪಣಿ ತುಂಡಾಗುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಹೆಚ್ಚು ಜನರಿಗೆ ಸೋಂಕು ತಗುಲಿದರೆ ಸಮುದಾಯದಲ್ಲಿ ನೈಸರ್ಗಿಕವಾಗಿ ಪ್ರತಿರೋಧ ಶಕ್ತಿ ರೂಪುಗೊಳ್ಳುತ್ತದೆ. ಇಲ್ಲವೇ, ಎಲ್ಲರಿಗೂಲಸಿಕೆ ಹಾಕುವ ಮೂಲಕವೂ ಪ್ರತಿರೋಧ ಶಕ್ತಿ ರೂಪಿಸಬಹುದು. ನೈಸರ್ಗಿಕವಾಗಿ ರೂಪುಗೊಂಡ ಪ್ರತಿರೋಧ ಶಕ್ತಿಯ ಪ್ರತಿರೋಧ ಪ್ರಮಾಣ ಕಡಿಮೆ ಇರುತ್ತದೆ. ಲಸಿಕೆ ಹಾಕುವ ಮೂಲಕ ಸೃಷ್ಟಿಸಲಾಗುವ ಪ್ರತಿರೋಧದ ಪ್ರಮಾಣ ಅಧಿಕವಾಗಿರುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT