ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ ನೋಡಿ ಅವರನ್ನು ಗುರುತಿಸಬಹುದು: ಮೋದಿ ಮಾತು ಈಗ ಮುನ್ನೆಲೆಗೆ!

Last Updated 6 ಜನವರಿ 2020, 4:52 IST
ಅಕ್ಷರ ಗಾತ್ರ

ಬೆಂಗಳೂರು:‘ಅಶಾಂತಿ ಉಂಟು ಮಾಡುತ್ತಿರುವವರು ಯಾರು ಎಂದು ಅವರಬಟ್ಟೆಗಳಿಂದಲೇ ಗುರುತಿಸಬಹುದು,’ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರನ್ನು ಜರೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಜೆಎನ್‌ಯು ದಾಂದಲೆಯ ಸಂದರ್ಭಕ್ಕೆ ಸಾಮಾಜಿಕ ತಾಣಗಳಲ್ಲಿ ಹೋಲಿಕೆ ಮಾಡಲಾಗುತ್ತಿದೆ.

ಹಾಸ್ಟೆಲ್‌ ಶುಲ್ಕ ಹೆಚ್ಚಳ, ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಲವು ದಿನಗಳಿಂದಲೂ ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಹೋರಾಟ ನಿರತ ವಿದ್ಯಾರ್ಥಿಗಳ ಮೇಲೆ ಭಾನುವಾರ ರಾತ್ರಿ ಮುಸುಕುದಾರಿಗಳ ಗುಂಪು ದಾಳಿ ನಡೆಸಿದೆ.

ದಾಳಿ ನಡೆಸಿದವರು ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಎಂದು ಪೆಟ್ಟು ತಿಂದ ಜೆಎನ್‌ಯು ವಿದ್ಯಾರ್ಥಿಗಳು ಈಗಾಗಲೇ ಆರೋಪಿಸಿದ್ದಾರೆ.

ಈ ದಾಳಿಯಲ್ಲಿ ಭಾಗಿಯಾದವರು ಎನ್ನಲಾದ ಮೂವರು ಮುಸುಕುಧಾರಿಗಳ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಜೆಎನ್‌ಯು ಆವರಣದಲ್ಲಿ ನಿಂತಿರುವ ಇಬ್ಬರು ಯುವಕರು, ಒಬ್ಬ ಯುವತಿಯ ಚಿತ್ರ ಅದಾಗಿದೆ. ಚಿತ್ರವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವ ಹಲವರು ‘ಬಟ್ಟೆಗಳಿಂದ ಅವರನ್ನು ಗುರುತಿಸಿ,’ ಎಂದು ಪರೋಕ್ಷವಾಗಿ ಮೋದಿ ಅವರಿಗೆ ತಿವಿದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದನಡೆಸುವ ನೆಪದಲ್ಲಿ ಅಶಾಂತಿ ಉಂಟುಮಾಡುತ್ತಿರುವವರನ್ನು ಅವರಬಟ್ಟೆಗಳ ಮೂಲಕವೇ ಪತ್ತೆ ಹಚ್ಚಬಹುದು ಎಂದು ಪ್ರಧಾನಿ ಮೋದಿ ಅವರು ಜಾರ್ಖಂಡ್‌ ಚುನಾವಣಾ ಪ್ರಚಾರದ ವೇಳೆ ದುಮ್ಕ ಸಮಾವೇಶದಲ್ಲಿ ಹೇಳಿದ್ದರು. ಅವರ ಹೇಳಿಕೆಯನ್ನು ಸದ್ಯ ಜೆಎನ್‌ಯುನಲ್ಲಿ ದಾಂದಲೆ ನಡೆಸಿದ ಮುಸುಕುಧಾರಿಗಳ ಫೊಟೊಗೆ ಶೀರ್ಷಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ. ‘ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಮುಸುಕುಧಾರಿಗಳನ್ನೂ ಅವರ ಬಟ್ಟೆಗಳಿಂದಲೆ ಗುರುತಿಸಬಹುದೇ?’ ಎಂದಿದ್ದಾರೆ ನೆಟ್ಟಿಗರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT