ಮಂಗಳವಾರ, ಜನವರಿ 21, 2020
23 °C
ಆಟೊಮೊಬೈಲ್‌ ಸಂಕಷ್ಟ

ಆಟೋಮೊಬೈಲ್‌ ವಲಯ ಸಂಕಷ್ಟದಲ್ಲಿದ್ದರೆ... ಟ್ರಾಫಿಕ್‌ ಜಾಮ್‌ ಏಕೆ: ಬಿಜೆಪಿ ಸಂಸದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಒಂದು ವೇಳೆ ದೇಶದಲ್ಲಿ ಆಟೋಮೊಬೈಲ್‌ ವಲಯ ಸಂಕಷ್ಟದಲ್ಲಿದ್ದರೆ, ಟ್ರಾಫಿಕ್‌ ಜಾಮ್‌ ಏಕೆ ಆಗುತ್ತಿದೆ ಎಂದು ಬಿಜೆಪಿ ಸಂಸದ ವೀರೇಂದ್ರ ಸಿಂಗ್‌ ಮಸ್ತ್ ಅವರು ಸಂಸತ್‌ ಕಲಾಪದಲ್ಲಿ ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ದೇಶದಲ್ಲಿ ಆಟೋಮೊಬೈಲ್‌ ವಲಯವು ಸಂಕಷ್ಟದಲ್ಲಿ ಇದೆ ಎಂದು ಹೇಳುತ್ತಿರುವ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಹೆಸರಿಗೆ ಮಸಿ ಬಳಿಯುವ ಕೆಲಸದಲ್ಲಿ ತೊಡಗಿವೆ ಎಂದು ವೀರೇಂದ್ರ ಸಿಂಗ್‌ ಹೇಳಿದ್ಧಾರೆ. 

ಗುರುವಾರ ಸಂಸತ್‌ ಕಲಾಪ ಉದ್ದೇಶಿಸಿ ಮಾತನಾಡಿದ ಅವರು, ’‍ದೇಶದ ಆಟೋಮೊಬೈಲ್‌ ವಲಯವು ಸಂಕಷ್ಟ ಎದುರಿಸುತ್ತಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹೆಸರನ್ನು ಹಾಳುಮಾಡುವ ಹುನ್ನಾರವಾಗಿದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ವಾಹನ ಮಾರಾಟ ಕಡಿಮೆಯಾಗಿದ್ದರೆ, ದೇಶದ ನಗರಗಳ ರಸ್ತೆಗಳ ಮೇಲೆ ಟ್ರಾಫಿಕ್‌ ಜಾಮ್‌ ಏಕೆ ಆಗುತ್ತಿತ್ತು?‘ ಎಂದು ಕೇಳಿದ್ದಾರೆ. 

ಅಂಕಿ–ಸಂಖ್ಯೆಗಳ ಪ್ರಕಾರ, ಭಾರತೀಯ ಆಟೋಮೊಬೈಲ್‌ ವಲಯವು ಹಲವು ತಿಂಗಳಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು ದೃಢಪಟ್ಟಿದೆ.   
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು