ಶುಕ್ರವಾರ, ಫೆಬ್ರವರಿ 21, 2020
19 °C

ಭಾರತದಲ್ಲಿ ಕೆಲಸ ಮಾಡಲು ಬಯಸುವವರು ಹಿಂದೂ ಸಬಲೀಕರಣಕ್ಕೆ ದುಡಿಯಬೇಕು:ಭಯ್ಯಾಜಿ ಜೋಷಿ

ಪಿಟಿಐ Updated:

ಅಕ್ಷರ ಗಾತ್ರ : | |

ಸುರೇಶ್ ಭಯ್ಯಾಜಿ ಜೋಷಿ

ಪಣಜಿ: ಭಾರತದಲ್ಲಿ ಕೆಲಸ ಮಾಡಲು ಬಯಸುವವರು ಹಿಂದೂ  ಸಮುದಾಯಕ್ಕಾಗಿ ಮತ್ತು ಅದರ ಸಬಲೀಕರಣಕ್ಕಾಗಿ ದುಡಿಯಬೇಕು ಎಂದಿದ್ದಾರೆ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಷಿ.

ಪಣಜಿಯ ಡೊಣಾ ಪೌಲಾದಲ್ಲಿ ಶಿನವಾರ ನಡೆದ ಕಾರ್ಯಕ್ರಮದಲ್ಲಿ  ವಿಶ್ವಗುರು ಭಾರತ ಮತ್ತು ಆರ್‌ಎಸ್‌ಎಸ್ ದೃಷ್ಟಿಕೋನ ಎಂಬ ವಿಷಯದ ಬಗ್ಗೆ ಜೋಷಿ ಮಾತನಾಡಿದ್ದಾರೆ.  ನಾನು ಮೇಧಾವಿಗಳೊಂದಿಗೆ ಮಾತನಾಡಿದ್ದು, 2020ರಲ್ಲಿ ಭಾರತವು  ಉತ್ಕೃಷ್ಟ ರಾಷ್ಟ್ರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಕೆಲಸ ಮಾಡಲು ಬಯಸುವವರು ಹಿಂದೂ ಸಮುದಾಯದೊಂದಿಗೆ ಕೆಲಸ ಮಾಡಿ ಅದರ ಸಬಲೀಕರಣ ಮಾಡಬೇಕು. ಭಾರತದಲ್ಲಿ ಹಿಂದೂಗಳು ಏರಿಳಿತಗಳನ್ನು ಕಂಡಿದ್ದಾರೆ. ಭಾರತವನ್ನು ಹಿಂದೂ ಸಮುದಾಯದಿಂದ ವಿಭಜಿಸಲು ಆಗುವುದಿಲ್ಲ. ಹಿಂದೂಗಳು ಸದಾ ದೇಶದ ಕೇಂದ್ರವಾಗಿರುತ್ತಾರೆ ಎಂದು ಭಯ್ಯಾಜಿ ಜೋಷಿ  ಹೇಳಿದ್ದಾರೆ.

ಹಿಂದೂಗಳು ಕೋಮುವಾದಿಗಳು ಅಥವಾ ಎದುರಾಳಿಗಳು ಅಲ್ಲ. ಯಾರೊಬ್ಬರೂ ಹಿಂದೂ ಸಮುದಾಯದೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ಹೇಳುವುದಿಲ್ಲ.  ಹಿಂದೂಗಳಲ್ಲಿ ಜಾಗೃತಿ ಮತ್ತು ಒಗ್ಗಟ್ಟು ಸೃಷ್ಟಿಸಲು ಇತರ ಸಮುದಾಯದ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿಲ್ಲ. ಆ ರೀತಿ ಯಾರೂ ಭಾವಿಸಬೇಕಾಗಿಲ್ಲ. ಹಿಂದೂಗಳು ಪ್ರಬಲರಾಗಿದ್ದು.  ಯಾವುದೇ ವಿನಾಶಕಾರಿ ಚಟುವಟಿಕೆಗಳಲ್ಲಿ ತೊಡಗಿಲ್ಲ ಎಂದು ನಾವು ಜಗತ್ತಿನ ಮುಂದೆ ಧೈರ್ಯವಾಗಿ ಹೇಳಬಲ್ಲೆವು. 

ಹಿಂದೂಗಳು ಮಾಡಿದ ಯುದ್ಧಗಳೆಲ್ಲವೂ ಸ್ವಯಂ ರಕ್ಷಣೆಗಾಗಿ ಆಗಿತ್ತು. ಸ್ವಯಂ ರಕ್ಷಣೆ ಎಲ್ಲರ ಹಕ್ಕು. ಸಮನ್ವಯದ ದಾರಿಯಲ್ಲಿ  ನಡೆಯುವುದನ್ನು ಜಗತ್ತಿಗೆ ಕಲಿಸಬೇಕಾದ ಕರ್ತವ್ಯ ಭಾರತಕ್ಕಿದೆ. ಭಾರತ ಮತ್ತು ಹಿಂದೂಗಳಿಂದ ಮಾತ್ರ ಇದು ಸಾಧ್ಯ ಎಂದು ಭಯ್ಯಾಜಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು