ಗುರುವಾರ , ಆಗಸ್ಟ್ 22, 2019
26 °C

ಅಕ್ರಮ ಪ್ರವೇಶ: 12 ಬಾಂಗ್ಲಾ ಪ್ರಜೆಗಳ ಸೆರೆ

Published:
Updated:

ಕೊಲ್ಕತ್ತ: ಭಾರತ–ಬಾಂಗ್ಲಾದೇಶ ಗಡಿಯ ಬಿಥಾರಿ ಹಾಗೂ ಹಕೀಪುರ್‌ ಪ್ರದೇಶದಲ್ಲಿ, ಅನಧಿಕೃತವಾಗಿ ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ 12 ಬಾಂಗ್ಲಾ ಪ್ರಜೆಗಳನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್‌)ಸಿಬ್ಬಂದಿ ಬಂಧಿಸಿದ್ದಾರೆ.

8 ಮಹಿಳೆಯರು, ನಾಲ್ವರು ಪುರುಷರು ಹಾಗೂ ಒಂದು ಮಗುವನ್ನು ವಶಕ್ಕೆ ಪಡೆಯಲಾಗಿದೆ. ಬಾಂಗ್ಲಾದ ದಲ್ಲಾಳಿಗಳ ಸಹಾಯದಿಂದ ಭಾರತ ಪ್ರವೇಶಿಸಿರುವುದಾಗಿ ಬಂಧಿತರು ತಿಳಿಸಿದ್ದಾರೆ.ಇವರನ್ನು ಸಂಬಂಧಿಸಿದ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಬಿಎಸ್‌ಎಫ್‌ ತಿಳಿಸಿದೆ. 

 

Post Comments (+)