'ನಾನೇ ಹಿರಿಯ ರೌಡಿ, ಅಭ್ಯರ್ಥಿಯಾಗಬೇಕಿರುವುದು ನಾನು': ತೆಲಂಗಾಣ ಕಾಂಗ್ರೆಸ್ ನೇತಾರ

7

'ನಾನೇ ಹಿರಿಯ ರೌಡಿ, ಅಭ್ಯರ್ಥಿಯಾಗಬೇಕಿರುವುದು ನಾನು': ತೆಲಂಗಾಣ ಕಾಂಗ್ರೆಸ್ ನೇತಾರ

Published:
Updated:

ನವದೆಹಲಿ: ಚುನಾವಣೆಯಲ್ಲಿ ಸ್ಪರ್ಧಿಸಲು ನೇತಾರರು ತಮ್ಮ ಅರ್ಹತೆಗಳನ್ನು ಹೇಳಿಕೊಳ್ಳುತ್ತಾರೆ. ಪಕ್ಷದಲ್ಲಿ ತಾವು ಮಾಡಿದ ಕೆಲಸ ಕಾರ್ಯಗಳು, ಜನ ಬೆಂಬಲದ ಬಗ್ಗೆ ಪಕ್ಷದ ಮುಖ್ಯಸ್ಥರಿಗೆ ಮನವರಿಕೆ ಮಾಡಿ ಅಭ್ಯರ್ಥಿ ಸ್ಥಾನ ಗಿಟ್ಟಿಸಲು ಹವಣಿಸುತ್ತಾರೆ. ಇಂತಿರುವಾಗ ಚುನಾವಣೆಗೆ ಸನ್ನದ್ದವಾಗಿರುವ ತೆಲಂಗಾಣದಲ್ಲಿ ಕಾಂಗ್ರೆಸ್ ನೇತಾರ ಬಿಲ್ಲ ಸುಧೀರ್ ರೆಡ್ಡಿ ಅವರ ಅರ್ಹತೆಯ ಬಗ್ಗೆ ಅವರು ನೀಡಿದ ವಿವರಣೆ ಎಲ್ಲರಿಗಿಂತಲೂ ಭಿನ್ನವಾಗಿದೆ.

ಪಕ್ಷದಲ್ಲಿ ಹಿರಿಯ ರೌಡಿ ನಾನು, ಹಾಗಾಗಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಇದೆ ಎಂದು ರೆಡ್ಡಿ ವಾದಿಸಿದ್ದಾರೆ.
ಮಾಧ್ಯಮದವರೊಂದಿಗೆ ಸುಧೀರ್ ರೆಡ್ಡಿ ಮಾತನಾಡಿರುವ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ತಾನು ಹಲವಾರು ಅಪರಾಧ ಪ್ರಕರಣದಲ್ಲಿದ್ದೇನೆ. ಒಬ್ಬ ಹಿರಿಯ ರೌಡಿ ಎಂದು ಪರಿಗಣಿಸಿ ಅಭ್ಯರ್ಥಿ ಟಿಕೆಟ್ ನೀಡಬೇಕು. ಜಂಗ ರಾಘವ ರೆಡ್ಡಿಗೆ ಕಾಂಗ್ರೆಸ್ ಸೀಟು ಲಭಿಸುವ ಸಾಧ್ಯತೆ ಇರುವುದರಿಂದ ತಾನು ರಾಘವ ರೆಡ್ಡಿಯಂತೆ ಅಲ್ಲ. ಆತನಂತೆ ಗುತ್ತಿಗೆ ಪಡೆದು ಕೊಲೆ ಮಾಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅನ್ಯಾಯ ನಡೆದಾಗ ನಾನು ಅದನ್ನು ಪ್ರತಿಭಟಿಸಿದ್ದೀನಿ. ಪಕ್ಷಕ್ಕಾಗಿ ನಾನು ರೌಡಿ ಆದೆ ಎಂದು ರೆಡ್ಡಿ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !