ಚಂಡಮಾರುತ: ಮುಂಚಿತ ಸೂಚನೆ

7
ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿಗಳ ಪ್ರಯತ್ನ

ಚಂಡಮಾರುತ: ಮುಂಚಿತ ಸೂಚನೆ

Published:
Updated:
Prajavani

ನವದೆಹಲಿ: ಕನಿಷ್ಠ 6–12 ತಾಸು ಮುಂಚಿತವಾಗಿ ಚಂಡಮಾರುತ ಕುರಿತು ಮಾಹಿತಿ ನೀಡುವ ವ್ಯವಸ್ಥೆ ರೂಪಿಸಲು ಭಾರತೀಯ ಹವಾಮಾನ ಇಲಾಖೆ ತಜ್ಞರು, ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.

ಕಳೆದ ವರ್ಷ ಮುಂಗಾರು ಆರಂಭಕ್ಕೂ ಮುನ್ನ ಬೀಸಿದ ಚಂಡಮಾರುತಗಳನ್ನು ಗ್ರಹಿಸಲು ಸಾಧ್ಯವಾಗಿರಲಿಲ್ಲ. ಅದರಿಂದ ಜಾಗೃತವಾಗಿರುವ ಇಲಾಖೆ ಸಾಕಷ್ಟು ಮುಂಚಿತವಾಗಿ ಮಾಹಿತಿ ಗ್ರಹಿಸಲು ತಯಾರಿ ನಡೆಸಿದೆ.

ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳು ಮತ್ತು ಹವಾಮಾನ ತಜ್ಞರು ಭೂವಿಜ್ಞಾನ ಸಚಿವಾಲಯದ ಇತರ ಇಲಾಖೆಗಳ ಸಹಭಾಗಿತ್ವದಲ್ಲಿ ಚಂಡಮಾರುತ ಮಾದರಿಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೂಡ ನೆರವು ನೀಡುತ್ತಿದೆ ಎಂದು ಇಲಾಖೆ ಹೆಚ್ಚುವರಿ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

ಮುಂಗಾರು ಋತುವಿನಲ್ಲಿ ರಾಜ್ಯಗಳಿಗೆ ಹವಾಮಾನ ಬದಲಾವಣೆ ಕುರಿತು ಟ್ವಿಟರ್‌ ಮೂಲಕ ಮುನ್ನೆಚ್ಚರಿಕಾ ಸಂದೇಶ ರವಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಚಂಡಮಾರುತಕ್ಕೆ 200 ಜನರು ಬಲಿಯಾಗಿದ್ದರು. ರಾಜಸ್ಥಾನ, ಉತ್ತರ ಪ್ರದೇಶದಲ್ಲಿಯೇ 180 ಜನರು ಪ್ರಾಣ ತೆತ್ತಿದ್ದರು.

**

ಏಪ್ರಿಲ್‌ನಿಂದ ಕಾರ್ಯಾರಂಭ

ಮುಂಗಾರು ಋತು ಆರಂಭಕ್ಕೂ ಮುನ್ನ ಹವಾಮಾನ ಬದಲಾವಣೆ ಬಗ್ಗೆ ಅದರಲ್ಲೂ ವಿಶೇಷವಾಗಿ ಗುಡುಗು, ಸಿಡಿಲುಗಳಿಂದ ಕೂಡಿದ ಚಂಡಮಾರುತಗಳ ಬಗ್ಗೆ ಮುಂಚಿತವಾಗಿ ಮುನ್ಸೂಚನೆ ನೀಡುವ ವ್ಯವಸ್ಥೆ ಇದೇ ಏಪ್ರಿಲ್‌ನಿಂದ ಕಾರ್ಯಾರಂಭ ಮಾಡಲಿದೆ.

ಮಾರುತಗಳ ಚಲನವಲನಗಳನ್ನು ಸಾಕಷ್ಟು ಮುಂಚಿತವಾಗಿ ಗ್ರಹಿಸುವ ಕಾರ್ಯಾಚರಣೆ ವಿಧಾನವನ್ನು ಭಾರತೀಯ ಹವಾಮಾನ ಇಲಾಖೆ ಅಳವಡಿಸಿಕೊಂಡಿದೆ ಎಂದು ಭೂವಿಜ್ಞಾನ ಸಚಿವಾಲಯದ ರಾಜೀವನ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !