ಸೋಮವಾರ, ನವೆಂಬರ್ 18, 2019
29 °C

ಹೊಸ ಮ್ಯಾಪ್‌ನಲ್ಲಿ ಭಾರತ ಸೇರಿದವು ಪಿಒಕೆ, ಗಿಲ್ಗಿಟ್–ಬಾಲ್ಟಿಸ್ತಾನ

Published:
Updated:

ನವದೆಹಲಿ: ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹೊಸ ನಕ್ಷೆಯಲ್ಲಿ (ಮ್ಯಾಪ್‌) ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಗಿಲ್ಗಿಟ್–ಬಾಲ್ಟಿಸ್ತಾನ ಕೂಡ ಭಾರತದ ಗಡಿಯೊಳಗೆ ಸೇರಿದೆ.

ಜಮ್ಮು–ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಅಕ್ಟೋಬರ್ 31ರಂದು ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ದೇಶದ ಹೊಸ ನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಿತ್ತು. ಇದರಲ್ಲಿ ಜಮ್ಮು–ಕಾಶ್ಮೀರದ ಗಡಿಯೊಳಗೆ ಪಿಒಕೆಯ ರಾಜಧಾನಿ ಮುಜಫರಾಬಾದ್‌ ಅನ್ನು ಗುರುತಿಸಲಾಗಿದೆ. ಹಾಗೆಯೇ ಲಡಾಖ್ ಗಡಿಯೊಳಗೆ ಗಿಲ್ಗಿಟ್–ಬಾಲ್ಟಿಸ್ತಾನವನ್ನೂ ಗುರುತಿಸಲಾಗಿದೆ.

ಇದನ್ನೂ ಓದಿ: ಭಾರತಕ್ಕೀಗ ಹೊಸ ಮ್ಯಾಪ್‌: ಇಲ್ಲಿದೆ ನೋಡಿ


ನಕ್ಷೆಯಲ್ಲಿ ಪಿಒಕೆಯ ಮುಜಫರಾಬಾದ್‌ ಅನ್ನು ಗುರುತಿಸಿರುವುದು

‘1947ರಲ್ಲಿ ಜಮ್ಮು–ಕಾಶ್ಮೀರ 14 ಜಿಲ್ಲೆಗಳನ್ನು ಒಳಗೊಂಡಿತ್ತು. ಅವುಗಳೆಂದರೆ ಕಥುವಾ, ಜಮ್ಮು, ಉಧಂಪುರ, ರೇಸಿ, ಅನಂತನಾಗ್, ಬಾರಾಮುಲ್ಲಾ, ಪೂಂಛ್, ಮೀರ್‌ಪುರ, ಮುಜಫರಾಬಾದ್, ಲೇಹ್, ಲಡಾಖ್, ಗಿಲ್ಗಿಟ್, ಗಿಲ್ಗಿಟ್ ವಜರತ್, ಚಿಲಾಸ್ ಮತ್ತು ಬುಡಕಟ್ಟು ಪ್ರದೇಶ’ ಎಂದು ಗೃಹ ಇಲಾಖೆಯ ಪ್ರಕಟಣೆ ತಿಳಿಸಿದೆ.

2019ರ ವೇಳೆಗೆ ಒಟ್ಟು 28 ಜಿಲ್ಲೆಗಳಾಗಿ ಮರುವಿಂಗಡನೆಯಾಗಿವೆ. ಅವುಗಳಲ್ಲಿ ಹೊಸ ಜಿಲ್ಲೆಗಳು ಕುಪ್ವಾರ, ಬಂಡೀಪುರ, ಗಂದೇರ್‌ಬಾಲ್, ಶ್ರೀನಗರ, ಬುದ್ಗಾಂ, ಪುಲ್ವಾಮಾ, ಶೋಪಿಯಾನ್, ಕುಲ್ಗಾಂ, ರಾಜೌರಿ, ರಾಂಬಾನ್, ದೋಡಾ, ಕಿಶ್ತ್‌ವಾರ್, ಸಾಂಬಾ ಮತ್ತು ಕಾರ್ಗಿಲ್ ಆಗಿವೆ.

ಹೊಸ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದ ಬಳಿಕ ದೇಶದಲ್ಲಿ ರಾಜ್ಯಗಳ ಸಂಖ್ಯೆ 28 ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9 ಆಗಿವೆ.


ಭಾರತದ ಹೊಸ ನಕ್ಷೆ

 

ಪ್ರತಿಕ್ರಿಯಿಸಿ (+)