ಸೋಮವಾರ, ಆಗಸ್ಟ್ 2, 2021
25 °C

ಕೋವಿಡ್‌-19: ಮಾಸ್ಕ್ ಉತ್ಪಾದನೆ ಗಣನೀಯ ಹೆಚ್ಚಳ; ದಾಸ್ತಾನು ರಫ್ತಿಗೆ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಮಾಸ್ಕ್‌ಗಳ ಉತ್ಪಾದನೆ (ಎನ್‌–95 ಹೊರತುಪಡಿಸಿ) ಅಧಿಕ ಪ್ರಮಾಣದಲ್ಲಿದ್ದು, ಇವುಗಳ ರಫ್ತು ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ವೈದ್ಯಕೀಯ ಉಪಕರಣ ತಯಾರಿಕಾ ಉದ್ಯಮವು ಸರ್ಕಾರವನ್ನು ಒತ್ತಾಯಿಸಿದೆ. 

ದೇಶದಾದ್ಯಂತ ಕೋವಿಡ್–19 ವ್ಯಾಪಿಸುತ್ತಿರುವುದನ್ನು ಗಮನಿಸಿದ್ದ ಕೇಂದ್ರ ಸರ್ಕಾರ, ಕೊರತೆಯಾಗಬಾರದು ಎಂಬ ಕಾರಣಕ್ಕೆ ಮಾಸ್ಕ್‌ಗಳ ರಫ್ತಿನ ಮೇಲೆ ಮಾರ್ಚ್ ತಿಂಗಳಿನಲ್ಲಿ ನಿರ್ಬಂಧ ವಿಧಿಸಿತ್ತು. ಹತ್ತಿ, ರೇಷ್ಮೆ, ಉಣ್ಣೆಯಿಂದ ತಯಾರಿಸಿದ ವೈದ್ಯಕೀಯೇತರ ಹಾಗೂ ನಾನ್ ಸರ್ಜಿಕಲ್ ಮಾಸ್ಕ್‌ಗಳ ಮೇಲಿನ ನಿರ್ಬಂಧವನ್ನು ಸರ್ಕಾರ ಕಳೆದ ತಿಂಗಳಷ್ಟೇ ತೆಗೆದು ಹಾಕಿತ್ತು. ಆದರೆ ವೈದ್ಯಕೀಯ ಹಾಗೂ ಸರ್ಜಿಕಲ್ ಮಾಸ್ಕ್‌ಗಳ ರಫ್ತು ನಿಷೇಧ ಮುಂದುವರಿದಿತ್ತು. 

ರಫ್ತಿಗೆ ನಿಷೇಧ ಹೇರಿದ ಬಳಿಕ, ದಾಖಲೆ ಮಟ್ಟದಲ್ಲಿ ಮಾಸ್ಕ್‌ಗಳ ಉತ್ಪಾದನೆ ಮಾಡಲಾಗಿದೆ. ಅಧಿಕ ಪ್ರಮಾಣದಲ್ಲಿ ದಾಸ್ತಾನು ಇರುವ ಮಾಸ್ಕ್‌ಗಳನ್ನು ರಫ್ತು ಮಾಡಿ, ಮತ್ತೆ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಲು ಉದ್ಯಮಗಳಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಾಗಿದೆ. 

ದೇಶೀಯವಾಗಿ ಬಳಕೆಗೆ ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಇದೆ. ಹೀಗಾಗಿ ಮಾಸ್ಕ್‌ಗಳು ಮಾರಾಟವಾಗದೇ ಉಳಿದಿವೆ. ಬೇಡಿಕೆ ಕುಸಿದಿರುವುದರಿಂದ ಕಳೆದ 15–20 ದಿನಗಳಿಂದ ಉತ್ಪಾದನೆ ಪ್ರಮಾಣವನ್ನು ತಗ್ಗಿಸಲಾಗಿದೆ’ ಎಂದು ವೈದ್ಯಕೀಯ ಉಪಕರಣ ತಯಾರಿಕಾ ಸಂಘಟನೆಯು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ. 

***

ಮಾಸ್ಕ್ ಉತ್ಪಾದನೆ ಸಾಮರ್ಥ್ಯ

*ಮೂರು ಪದರುಗಳ 150 ಕೋಟಿ ಮಾಸ್ಕ್

*ನಾಲ್ಕು ಪದರುಗಳ 5.9 ಕೋಟಿ ಮಾಸ್ಕ್ 

*19 ಲಕ್ಷ ಹೆಚ್ಚುವರಿ ಮಾಸ್ಕ್

*3.1 ಕೋಟಿ ಎನ್‌–95 ಮಾಸ್ಕ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು