ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ, ಇಟಲಿಯಿಂದ ತರಬೇತಿ ಪಡೆದ ಸ್ನೈಪರ್‌ಗಳನ್ನು ಗಡಿಯಲ್ಲಿ ನಿಯೋಜಿಸಿದ ಸೇನೆ

ವಿಶೇಷ ತರಬೇತಿ ಪಡೆದ ಸ್ನೈಪರ್‌ಗಳ ಕೈಯಲ್ಲಿದೆ ಹೊಸ ಬಂದೂಕುಗಳು *ಉಗ್ರರ ನುಸುಳುವಿಕೆ ತಡೆಯಲು ಕ್ರಮ
Last Updated 28 ಮೇ 2019, 6:56 IST
ಅಕ್ಷರ ಗಾತ್ರ

ನವದೆಹಲಿ:ಅಮೆರಿಕ, ಇಟಲಿಯಿಂದ ವಿಶೇಷವಾಗಿ ತರಬೇತಿ ಪಡೆದ ಸ್ನೈಪರ್‌ಗಳನ್ನು (ಬಹುದೂರಕ್ಕೆ ಗುರಿ ಇಟ್ಟು ಗುಂಡು ಹಾರಿಸಬಲ್ಲವರು) ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನಿಯೋಜಿಸಿದೆ.

ಉಗ್ರರ ಒಳನುಸುಳುವಿಕೆಯನ್ನು ತಡೆಯುವ ಸಲುವಾಗಿ ಸೇನೆಯು ‘ಬ್ಯಾರೆಟ್ಟಾ’, ‘338 ಲ್ಯಾಪುವಾ ಮ್ಯಾಗ್ನಮ್ ಸ್ಕಾರ್ಪಿಯೋ ಟಿಜಿಟಿ’, ‘50 ಕ್ಯಾಲಿಬರ್ ಎಂ95’ ಬಂದೂಕುಗಳನ್ನು ಹೊಂದಿರುವ ಸ್ನೈಪರ್‌ಗಳನ್ನುಎಲ್‌ಒಸಿ ಬಳಿ ನಿಯೋಜಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದಿ ಪ್ರಿಂಟ್ಸುದ್ದಿತಾಣ ವರದಿ ಮಾಡಿದೆ.

ಕಾರ್ಯಾಚರಣೆಯ ಅವಶ್ಯಕತೆಗೆ ಅನುಗುಣವಾಗಿ ವಿದೇಶಗಗಳಲ್ಲಿ ತರಬೇತುಗೊಳಿಸಿದ ವಿಶೇಷ ಪಡೆಗಳನ್ನು ಇತರ ಯೋಧರ ಜತೆ ನಿಯೋಜಿಸಲಾಗಿದೆ.

ಸ್ನೈಪರ್‌ಗಳಿಗೆ ನೀಡಲಾಗಿರುವ ಹೊಸ ಬಂದೂಕುಗಳು ಈವರೆಗೆ ಯೋಧರು ಬಳಸುತ್ತಿದ್ದ ರಷ್ಯಾ ನಿರ್ಮಿತಡ್ರಾಗುನೋವ್ ಬಂದೂಕುಗಳಿಗಿಂತ ಹೆಚ್ಚು ದೂರದ ಗುರಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. 1,000 ಮೀಟರ್‌ಗಳಷ್ಟು ದೂರದ ಗುರಿಯ ಮೇಲೆ ನಿಖರವಾಗಿ ದಾಳಿ ನಡೆಸುವಂತೆ ತರಬೇತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ನಿರ್ಮಿತ ‘ಬ್ಯಾರೆಟ್ ಎಂ95 ಆ್ಯಂಟಿ–ಮೆಟೀರಿಯಲ್’ ಬಂದೂಕು 1,800 ಮೀಟರ್ ದೂರದ ಗುರಿಯ ಮೇಲೆ ದಾಳಿ ನಡೆಸಲು ನೆರವಾಗಲಿದೆ.

ಬೋಲ್ಟ್-ಆಕ್ಷನ್ ಸ್ನೈಪರ್ ‘.50 ಬ್ರೋವಿಂಗ್ ಮೆಷಿನ್ ಗನ್ ಕಾರ್ಟ್ರಿಡ್ಜ್ (12.7×99 ಎಂಎಂ)’ ಅನ್ನು ವಿಶ್ವದಾದ್ಯಂತ ಅನೇಕ ವಿಶೇಷ ಪಡೆಗಳು ಬಳಸುತ್ತಿವೆ.

ಇನ್ನು ಬ್ಯಾರೆಟ್ ಎಂ82 ಸರಣಿಯ ‘ಎಂ95’ ಬಂದೂಕು ಮೊದಲು ಮಾರುಕಟ್ಟೆಗೆ ಬಂದಿದ್ದು 1995ರಲ್ಲಿ. ಇದು 10 ಕಿಲೋ ತೂಕವಿದೆ. ‘.50 ಕ್ಯಾಲಿಬರ್ ಆ್ಯಂಟಿ–ಮೆಟೀರಿಯಲ್ ರೈಫಲ್‌’ಗಳು ಮೊದಲು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, 1982ರಲ್ಲಿ.

ಇವುಗಳಲ್ಲದೆ ‘ವಿಕ್ರಿಕ್ಸ್, ಇಟಲಿಯ ಕಂಪನಿ ಬ್ಯಾರೆಟ್ಟಾದ ‘.338ಲ್ಯಾಪುವಾ ಮ್ಯಾಗ್ನಮ್ ಸ್ಕಾರ್ಪಿಯೋ ಟಿಜಿಟಿ’ ಬಂದೂಕುಗಳನ್ನೂ ಯೋಧರಿಗೆ ನೀಡಲಾಗಿದೆ. ಇದು ದೂರದ ಗುರಿಯ ಮೇಲೆ ದಾಳಿ ನಡೆಸಬಲ್ಲ ಬಂದೂಕಾಗಿದ್ದು, ಅಫ್ಗಾನಿಸ್ತಾನ ಮತ್ತು ಇರಾಕ್ ಯುದ್ಧಗಳಲ್ಲಿ ಬಳಸಲಾಗಿತ್ತು.

‘338 ಲ್ಯಾಪುವಾ ಮ್ಯಾಗ್ನಮ್’ ಅನ್ನು ಆರಂಭದಲ್ಲಿ 1,000 ಮೀಟರ್ ಗುರಿಯ ದಾಳಿಗೆಂದು ಅಭಿವೃದ್ಧಿಪಡಿಸಲಾಗಿತ್ತು. ಇದನ್ನು ನಂತರ 1,500 ಮೀಟರ್‌ ಮತ್ತು ಅದಕ್ಕಿಂತ ಹೆಚ್ಚು ದೂರದ ಗುರಿಯ ಮೇಲೆ ದಾಳಿ ನಡೆಸಲೂ ಬಳಸಲಾಯಿತು. ಸದ್ಯ ಕನಿಷ್ಠ 30 ರಾಷ್ಟ್ರಗಳು ಇದನ್ನು ಬಳಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT