ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಯೋಧನಿಗೆ ಕೊರೊನಾ ಸೋಂಕು, ಲಡಾಕ್‌ನಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ

Last Updated 18 ಮಾರ್ಚ್ 2020, 11:11 IST
ಅಕ್ಷರ ಗಾತ್ರ

ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನಲ್ಲಿ ಭಾರತೀಯ ಯೋಧ ಸೇರಿದಂತೆ ಬುಧವಾರ ಮತ್ತಿಬ್ಬರಿಗೆ ಕೋವಿಡ್‌ –19 ಸೋಂಕು ತಗುಲಿರುವುದು ಧೃಡಪಟ್ಟಿದ್ದು, ಸೋಂಕಿತರ ಸಂಖ್ಯೆ ಈಗ ಎಂಟಕ್ಕೇರಿದೆ.

ಕೆಲ ದಿನಗಳ ಹಿಂದೆ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಕೋವಿಡ್‌ 19 ಸೋಂಕು ಪೀಡಿತ ಸಜಾದ್‌ ಅಲಿ ಎಂಬುವವರ ಪತ್ನಿ ಹಾಗೂ ಮಗನಿಗೆ ಈಗ ಸೋಂಕು ತಗುಲಿದೆ.

‘ಶಂಕಿತ 34 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, ಅವರಲ್ಲಿ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಕೆಲದಿನಗಳ ಹಿಂದೆ ಸೋಂಕು ಪೀಡಿತರಾಗಿ ದಾಖಲಾಗಿದ್ದ ವ್ಯಕ್ತಿಯ ಪತ್ನಿ ಹಾಗೂ ಮಗನಿಗೆ ಈಗ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಲಡಾಕ್‌ ಕೇಂದ್ರಾಡಳಿತ ಪ್ರದೇಶದ ವಕ್ತಾರ ರಿಗ್ಜಿನ್‌ ಸಂಪೆಲ್‌ ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಸದ್ಯ ಕೊರೊನಾ ಪೀಡಿತರ ಸಂಖ್ಯೆ ಎಂಟಕ್ಕೆ ಏರಿದ್ದು, ಅವರಲ್ಲಿ ಒಬ್ಬರು ಯೋಧ ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

ಲಡಾಕ್‌ನ ಲೇಹ್‌ನಲ್ಲಿ ಮಂಗಳವಾರ ಭಾರತೀಯ ಸೇನೆಗೆ ಸೇರಿದ 34 ವರ್ಷದ ಯೋಧರೊಬ್ಬರಿಗೆ ಸೋಂಕು ತಗಲಿದ್ದು, ಯೋಧರಿಗೆ ಸೋಂಕು ತಗುಲಿದ ಮೊದಲ ಪ್ರಕರಣ ಇದಾಗಿದೆ. ಇರಾನ್‌ನಿಂದ ವಾಪಸ್‌ ಆಗಿದ್ದ ಯೋಧನ ಸೋಂಕು ಪೀಡಿತ ತಂದೆಯನ್ನು ಈಚೆಗೆ ಇಲ್ಲಿನ ಎಸ್‌ಎನ್‌ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಸೋಂಕು ತಗುಲಿರಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT