ಮಾನಸ ಸರೋವರ ಯಾತ್ರೆ: ಮಾರ್ಗ ಮಧ್ಯೆ ಸಂಕಷ್ಟದಲ್ಲಿ ರಾಜ್ಯದ 290 ಯಾತ್ರಿಕರು

7
ಯಾತ್ರೆಯಲ್ಲಿ 500ಕ್ಕೂ ಹೆಚ್ಚು ಯಾತ್ರಾರ್ಥಿಗಳು

ಮಾನಸ ಸರೋವರ ಯಾತ್ರೆ: ಮಾರ್ಗ ಮಧ್ಯೆ ಸಂಕಷ್ಟದಲ್ಲಿ ರಾಜ್ಯದ 290 ಯಾತ್ರಿಕರು

Published:
Updated:
ಕೈಲಾಸ ಮಾನಸ ಸರೋವರ

ಬೆಂಗಳೂರು: ನೇಪಾಳದ ಕೈಲಾಸ ಮಾನಸ ಸರೋವರ ಯಾತ್ರೆಗೆ ಕರ್ನಾಟಕದಿಂದ ತೆರೆಳಿದ್ದ 250ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸೇರಿ ನೂರಾರು ಭಾರತೀಯರು ಭಾರೀ ಮಳೆಯಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆಗಾಗಿ ಭಾರತೀಯ ರಾಯಭಾರಿ ಕಚೇರಿ ನೇಪಾಳ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ನೇಪಾಳದ ಪರ್ವತ ಪ್ರದೇಶ ಸಿಮಿಕೋಟ್‌ನಲ್ಲಿ ಮಳೆಯಿಂದಾಗಿ ಉಂಟಾಗಿರುವ ಭೂಕುಸಿತದಿಂದ ಕೈಲಾಸ ಮಾನಸಸರೋವರ ಯಾತ್ರೆಗೆ ಅಡಚಣೆಯಾಗಿದ್ದು, 500ಕ್ಕೂ ಹೆಚ್ಚು ಯಾತ್ರಿಕರು ಮಾರ್ಗಮಧ್ಯೆ ಯಾತನೆ ಅನುಭವಿಸುತ್ತಿದ್ದಾರೆ.

'ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ 200ಕ್ಕೂ ಹೆಚ್ಚು ಯಾತ್ರಾರ್ಥಿಗಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಲು ಆದೇಶ ನೀಡಿದ್ದೇನೆ. ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ದೆಹಲಿಯ ಕರ್ನಾಟಕ ಭವನದಲ್ಲಿರುವ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದು ಸಿಎಂ ಕುಮಾರಸ್ವಾಮಿ ಟ್ವೀಟಿಸಿದ್ದಾರೆ.

ನೇಪಾಳ್‌ಗಂಜ್‌ ಮತ್ತಯ ಸಿಮಿಕೋಟ್‌ನಲ್ಲಿರುವ ಭಾರತೀಯ ರಾಜಭಾರಿ ಕಚೇರಿಯ ಪ್ರತಿನಿಧಿಗಳು ಯಾತ್ರಾರ್ಥಿಗಳೊಂದಿಗೆ ನೇರ ಸಂಪರ್ಕ ಸಾಧಿಸಿದ್ದು, ಅಲ್ಲಿ ಆಹಾರ, ನೀರು ಹಾಗೂ ರಕ್ಷಣೆ ಪಡೆಯಲು ಸೂಕ್ತ ಸ್ಥಳದ ವ್ಯವಸ್ಥೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಯಾತ್ರಿಗಳನ್ನು ಅಲ್ಲಿಂದ ಕರೆದೊಯ್ಯಲು ರಾಯಭಾರ ಕಚೇರಿ ಪರ್ಯಾಯ ಮಾರ್ಗದ ಹುಡುಕಾಟ ನಡೆಸಿದೆ. ಆದರೆ, ಪ್ರತಿಕೂಲ ವಾತಾವರಣದಿಂದಾಗಿ ರಸ್ತೆ ಸಂಚಾರ ಅಸಾಧ್ಯವಾಗಿದೆ. ಹೆಲಿಕಾಪ್ಟರ್‌ಗಳ ಮೂಲಕ ಯಾತ್ರಿಕರನ್ನು ಕಠ್ಮಂಡುವಿಗೆ ಕರೆತರುವ ಪ್ರಯತ್ನ ಮುಂದುವರಿದಿದೆ.

ಇನ್ನಷ್ಟು: ನೇಪಾಳ ಮಳೆ: ಸಂಕಷ್ಟದಲ್ಲಿ ರಾಜ್ಯದ ಯಾತ್ರಾರ್ಥಿಗಳು

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !