ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೊಚ್ಚಲ ಯೋಜನೆ ಮಾನವಸಹಿತ ಗಗನಯಾನಕ್ಕೆ ಸಂಪುಟ ಅಸ್ತು

Last Updated 28 ಡಿಸೆಂಬರ್ 2018, 19:50 IST
ಅಕ್ಷರ ಗಾತ್ರ

ನವದೆಹಲಿ: ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಗೆಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

ದೇಶದ ಚೊಚ್ಚಲ ಮಾನವಸಹಿತ ಗಗನಯಾನಕ್ಕೆ ಅಂದಾಜು ₹10 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಕಾನೂನು ಸಚಿವ ರವಿಂಶಕರ್‌ ಪ್ರಸಾದ್‌ ತಿಳಿಸಿದರು.

2022ರ ವೇಳೆಗೆ ಮೂವರು ಭಾರತೀಯ ಗಗನಯಾತ್ರಿಗಳನ್ನು ಏಳು ದಿನಗಳ ಕಾಲ ಬಾಹ್ಯಾಕಾಶಕ್ಕೆ ಕಳಿಸಲಾಗುವುದು.

ಸಂಪೂರ್ಣ ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿದ ರಾಕೆಟ್‌ ಮತ್ತು ಗಗನನೌಕೆಯಲ್ಲಿ ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸಲಿರುವ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ ಎಂದು ರವಿಶಂಕರ್‌ ಪ್ರಸಾದ್‌ ತಿಳಿಸಿದರು.

ಬಾಹ್ಯಾಕಾಶಕ್ಕೆ ಮಾನವರನ್ನು ಕಳಿಸಿದ ಅಮೆರಿಕ, ರಷ್ಯಾ, ಚೀನಾದಂತಹ ಪ್ರತಿಷ್ಠಿತ ರಾಷ್ಟ್ರಗಳ ಪಟ್ಟಿಗೆ ಭಾರತ ಕೂಡ ಸೇರ್ಪಡೆಯಾಗಲಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದ ಸಂದರ್ಭದಲ್ಲಿ 2022 ರೊಳಗೆ ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದ್ದರು. ಅದಾದ ನಾಲ್ಕೂವರೆ ತಿಂಗಳ ನಂತರ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಐತಿಹಾಸಿಕ ಯಾನಕ್ಕೆ ಹೀಗಿದೆ ತಯಾರಿ

* 2022ರಲ್ಲಿ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಗಗನನೌಕೆ ಉಡಾವಣೆ

* ಜಿಎಸ್‌ಎಲ್‌ವಿ ಮಾರ್ಕ್‌ (ಎಂಕೆ)–3 ರಾಕೆಟ್‌ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತು ಒಯ್ಯಲಿದೆ

* ಮೂವರು ಭಾರತೀಯ ಗಗನಯಾತ್ರಿಗಳು ಉಡಾವಣೆಯಾದ ಕೇವಲ 16 ನಿಮಿಷಗಳಲ್ಲಿ ಬಾಹ್ಯಾಕಾಶ ತಲುಪಲಿದ್ದಾರೆ. ಐದರಿಂದ ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿರುತ್ತಾರೆ.

* ಭೂಮಿಯ ಕೆಳಹಂತದ ಕಕ್ಷೆ ಅಂದರೆ 300– 400 ಕಿ.ಮೀ ಎತ್ತರದಲ್ಲಿ ಬಾಹ್ಯಾಕಾಶ ನೌಕೆಯನ್ನು ನೆಲೆಗೊಳಿಸಲಿದೆ.

* 36 ನಿಮಿಷದ ಪಯಣದ ನಂತರ ಅವರು ಭೂಮಿಗೆ ಮರಳಲಿದ್ದಾರೆ

* ನೌಕೆ ಭೂಸ್ಪರ್ಶ ಮಾಡುವಾಗ ತಾಂತ್ರಿಕ ತೊಂದರೆ ಎದುರಾದರೆ ನೌಕೆಯನ್ನು ಬಂಗಾಳ ಕೊಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಸಲು ಯೋಜನೆ

* ಮಾನವ ಸಹಿತ ಬಾಹ್ಯಾಕಾಶ ನೌಕೆಗೂ ಮುನ್ನ ಎರಡು ಮಾನವ ರಹಿತ ನೌಕೆಗಳ ಉಡಾವಣೆ

* ಗಗನಯಾನಿಗಳಿಗೆ ಬೆಂಗಳೂರು ಮತ್ತು ವಿದೇಶದಲ್ಲಿ ಮೂರು ವರ್ಷ ಕಠಿಣ ತರಬೇತಿ

* ರಷ್ಯಾ ನಿರ್ಮಿತ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಅಲ್ಪಾವಧಿ ತರಬೇತಿ

* ಗಗನಯಾತ್ರಿಗಳು ಧರಿಸುವ ಸೂಟ್‌ ಈಗಾಗಲೇ ಸಿದ್ಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT