ಶನಿವಾರ, ಡಿಸೆಂಬರ್ 7, 2019
25 °C

ಐಟಿ ರಿಟರ್ನ್ಸ್‌ ಸಲ್ಲಿಸದವರ ವಿರುದ್ಧ ಕ್ರಮಕ್ಕೆ ‘ಸಿಬಿಡಿಟಿ’ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸದ (ಐಟಿಆರ್‌) ಮತ್ತು ಐಟಿ ರಿಟರ್ನ್ಸ್‌ ಸಲ್ಲಿಸುವುದನ್ನು ಮಧ್ಯದಲ್ಲಿಯೇ ಕೈಬಿಟ್ಟವರ ವಿರುದ್ಧ ದಂಡನಾ ಕ್ರಮ ಕೈಗೊಳ್ಳಬೇಕು ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.

2013ರಿಂದ 2017ರವರೆಗಿನ ಅವಧಿಯಲ್ಲಿ ಒಟ್ಟಾರೆ 2 ಕೋಟಿಯಷ್ಟು ತೆರಿಗೆದಾರರು ರಿಟರ್ನ್ಸ್‌ ಸಲ್ಲಿಸಿಲ್ಲ. ಇವರಲ್ಲಿ 25 ಲಕ್ಷ ತೆರಿಗೆದಾರರು ನಿಯಮಿತವಾಗಿ ರಿಟರ್ನ್ಸ್‌ ಸಲ್ಲಿಸಿಲ್ಲ.

ತೆರಿಗೆ ಪಾವತಿಸುವುದನ್ನು ತಪ್ಪಿಸಿರುವವರಿಗೆ ನೋಟಿಸ್‌ ನೀಡಲಾಗುವುದು. ಅರ್ಹ ಪ್ರಕರಣಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು