ಮಂಗಳವಾರ, ಮೇ 18, 2021
24 °C

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣ: ಮಧ್ಯವರ್ತಿಯನ್ನು ಬಿಟ್ಟುಕೊಡಲೊಪ್ಪದ ಇಟಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದ ಕಾರ್ಲೊ ಗೆರೊಸಾ ಅವರನ್ನು ಭಾರತಕ್ಕೆ ಬಿಟ್ಟುಕೊಡಲು ಇಟಲಿ ನಿರಾಕರಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ₹3,227 ಕೋಟಿ ಅವ್ಯವಹಾರ ನಡೆದಿದೆ ಎಂಬುದು ಆರೋಪ.  ಸಿಬಿಐ ಒತ್ತಾಯದ ಮೇರೆಗೆ ಇಂಟರ್‍‍ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ ನಂತರ ಇಟಲಿ ಸರ್ಕಾರ ಕಳೆದ ಅಕ್ಬೋಬರ್‍‍ನಲ್ಲಿ ಗೊರೊಸಾ ಅವರನ್ನು ಬಂಧಿಸಿತ್ತು.

ತನಿಖೆಯ ಭಾಗವಾಗಿ ಗೊರೊಸಾ ಅವರನ್ನು ತಮಗೆ ಬಿಟ್ಟುಕೊಡಬೇಕೆಂದು ಸಿಬಿಐ ನವೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು. ಹೆಲಿಕಾಪ್ಟರ್ ವ್ಯವಹಾರದಲ್ಲಿ ಗೊರಾಸಾ ಅವರ ಕೈವಾಡ ಬಗ್ಗೆ ಇರುವ ಆರೋಪಪಟ್ಟಿಯನ್ನು ಇಟಲಿಗೆ ನೀಡಲಾಗಿತ್ತು. ಆದರೆ, ಸ್ವಿಜ್ ಪಾಸ್‌‍ಪೋರ್ಟ್ ಹೊಂದಿರುವ ಗೊರೊಸಾ ಅವರನ್ನು ಬಿಟ್ಟುಕೊಡಲು ಆಗುವುದಿಲ್ಲ ಎಂದು ಇಟಲಿ ಹೇಳಿದೆ.

ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ಗಣ್ಯರ ಸಂಚಾರಕ್ಕೆಂದು ₹3,727 ಕೋಟಿ ವೆಚ್ಚದಲ್ಲಿ 12 'ಎಡಬ್ಲ್ಯೂ-101' ಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದ ಕುದುರಿಸುವಲ್ಲಿ ಅಧಿಕಾರಿಗಳಿಗೆ ₹452 ಕೋಟಿ ಲಂಚ ಪಾವತಿಯಾಗಿದೆ ಎಂಬ ಆರೋಪ ಕೇಳಿಬಂದಿತ್ತು.  12 ವಿವಿಐಪಿ ಹೆಲಿಕ್ಯಾಪ್ಟರ್‌ ಖರೀದಿಸುವಲ್ಲಿ ₹3600 ಕೋಟಿ ಮೌಲ್ಯದ ಡೀಲ್‍ನ್ನು ಅಂದಿನ ವಾಯುಸೇನೆಯ ಮುಖ್ಯಸ್ಥ ತ್ಯಾಗಿ ಇಟಲಿ ಮೂಲದ ಅಗಸ್ಟಾ ವೆಸ್ಟಲ್ಯಾಂಡ್‌ ಕಂಪನಿಯಿಂದ ಲಂಚ ಪಡೆದು ಕುದುರಿಸಿದ್ದರು ಎಂದು ಕಂಪನಿ ಆರೋಪಿಸಿತ್ತು.  ಈ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ಗೆರೊಸಾ ಎಂದು ಸಿಬಿಐ ತನಿಖೆಯಿಂದ ಪತ್ತೆಯಾಗಿತ್ತು. ಗೆರೊಸಾ ಅವರನ್ನು ಬಿಟ್ಟುಕೊಡಲು ಇನ್ನೊಂದು ಬಾರಿ ಮನವಿ ಮಾಡುವುದಾಗಿ ಸಿಬಿಐ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು