ವೈದ್ಯಕೀಯ ತಪಾಸಣೆಗೆ ಅಮೆರಿಕಕ್ಕೆ ತೆರಳಿದ ಸಚಿವ ಅರುಣ್ ಜೇಟ್ಲಿ

ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ವೈದ್ಯಕೀಯ ತಪಾಸಣೆಗಾಗಿ ಅನಿರೀಕ್ಷಿತವಾಗಿ ಅಮೆರಿಕಕ್ಕೆ ತೆರಳಿದ್ದಾರೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಕಿಡ್ನಿ ಸಮಸ್ಯೆಯಿಂದ ಏಮ್ಸ್‌ಗೆ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ದಾಖಲಾಗಿದ್ದ 66 ವರ್ಷ ವಯಸ್ಸಿನ ಅರುಣ್ ಜೇಟ್ಲಿ ಮೇನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯ ತಪಾಸಣೆಗಾಗಿ ಅವರು ಭಾನುವಾರ ರಾತ್ರಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಯಾವಾಗ ವಾಪಸ್ ಬರಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ಈವರೆಗೂ ಅವರು ವಿದೇಶ ಪ್ರವಾಸ ಕೈಗೊಂಡಿರಲಿಲ್ಲ.
ಇದನ್ನೂ ಓದಿ: ಆರೋಗ್ಯವೋ.. ಆಡಳಿತವೋ?– ರಾಜಕೀಯ ದ್ವಂದ್ವ
ಫೆಬ್ರುವರಿ 1ರಂದು ಕೇಂದ್ರ ಸರ್ಕಾರದ ಸರ್ಕಾರದ ಕೊನೆಯ ಬಜೆಟ್ ಮಂಡನೆಯಾಗಲಿದ್ದು ಜೇಟ್ಲಿ ಅವರು ಆರನೇ ಬಾರಿ ಬಜೆಟ್ ಮಂಡನೆ ಮಾಡಲಿದ್ದಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಸಿದ್ಧಪಡಿಸುವ ಸಮಿತಿ ಮತ್ತು ಪ್ರಚಾರ ವಿಭಾಗದ ಹೊಣೆಯನ್ನು ಅರುಣ್ ಜೇಟ್ಲಿ ಅವರಿಗೆ ಕಳೆದ ವಾರವಷ್ಟೇ ವಹಿಸಲಾಗಿತ್ತು. ಇವರ ಜತೆ ಹಿರಿಯ ನಾಯಕ, ಗೃಹ ಸಚಿವ ರಾಜನಾಥ ಸಿಂಗ್ ಅವರಿಗೂ ಜವಾಬ್ದಾರಿ ವಹಿಸಲಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಬಿಜೆಪಿ ಪ್ರಣಾಳಿಕೆ, ಪ್ರಚಾರ ಸಮಿತಿಗೆ ರಾಜನಾಥ, ಜೇಟ್ಲಿ ನೇತೃತ್ವ
ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ಭಾರತ– ಬ್ರಿಟನ್ ಆರ್ಥಿಕ ಹಾಗೂ ಹಣಕಾಸು ಸಚಿವರ 10ನೇ ಮಾತುಕತೆ ಸಭೆಗೂ ಜೇಟ್ಲಿ ಗೈರಾಗಿದ್ದರು. 2014ರಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇದನ್ನೂ ಓದಿ: ಜನನಾಯಕರ ಆರೋಗ್ಯ ಗೌಪ್ಯ!
ಬರಹ ಇಷ್ಟವಾಯಿತೆ?
0
0
0
0
1
0 comments
View All