ಮಂಗಳವಾರ, ಮಾರ್ಚ್ 31, 2020
19 °C

ಜಾಮಿಯಾ ಬಳಿ ಗುಂಡಿನ ದಾಳಿ: ಅನುರಾಗ್ ಠಾಕೂರ್ ವಿರುದ್ಧ ಸಿಡಿದೆದ್ದ ಟ್ವೀಟಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Anurag Thakur

ಬೆಂಗಳೂರು: ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈತ ಹಾರಿಸಿದ ಗುಂಡು ತಾಕಿ ಪ್ರತಿಭಟನಕಾರರೊಬ್ಬರಿಗೆ ಗಾಯವಾಗಿದೆ. 

ಕೈಯಲ್ಲಿ ಪಿಸ್ತೂಲ್ ಹಿಡಿದು ಸಿಎಎ ಪರ ಘೋಷಣೆ ಕೂಗಿದ್ದ ದಾಳಿಕೋರ 'ಸ್ವಾತಂತ್ಯ ತಗೊಳ್ಳಿ' ಎಂದು ಪ್ರತಿಭಟನಕಾರರತ್ತ ಗುಂಡು ಹಾರಿಸಿದ್ದನು. ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಈತ ರಾಮ್‌ಭಕ್ತ್ ಗೋಪಾಲ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಅನುರಾಗ್‌ ಠಾಕೂರ್‌, ವರ್ಮಾ ಚುನಾವಣಾ ಪ್ರಚಾರಕ್ಕೆ ನಿಷೇಧ: ಆಯೋಗ

ಕೆಲವು ದಿನಗಳ ಹಿಂದೆಯಷ್ಟೇ ದೆಹಲಿ ಚುನಾವಣಾ ಪ್ರಚಾರದಲ್ಲಿ  ಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್ ಪ್ರಚೋದನಕಾರಿ ಘೋಷಣೆ ಕೂಗಿದ್ದರು. ಠಾಕೂರ್ ಅವರು ಚಪ್ಪಾಳೆ ತಟ್ಟುತ್ತಾ ‘ದೇಶದ್ರೋಹಿಗಳನ್ನು’ ಎಂದು ಕೂಗಿದಾಗ, ನೆರೆದಿದ್ದ ಜನರು ‘ಗುಂಡಿಕ್ಕಿ’ ಎಂದು ಪ್ರತಿಕ್ರಿಯಿಸುತ್ತಾರೆ. ಮತ್ತೊಬ್ಬ ಹಿರಿಯ ಸಚಿವ ಗಿರಿರಾಜ್ ಸಿಂಗ್ ಅವರು ಸಹ ಈ ವೇಳೆ ಸ್ಥಳದಲ್ಲಿದ್ದರು. 

ಠಾಕೂರ್ ಅವರ ಭಾಷಣದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ಮೂರು ದಿನಗಳ ಕಾಲ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿದೆ.

ಇದನ್ನೂ ಓದಿದೆಹಲಿ ಪ್ರಚಾರದಲ್ಲಿ ‘ಗುಂಡಿಕ್ಕಿ ಕೊಲ್ಲಿ’!

#ArrestAnuragThakur ಟ್ರೆಂಡಿಂಗ್

ಕೇಂದ್ರ ಸಚಿವ ಅನುರಾಗ್ ಠಾಕೂರ್, ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಜಾಮಿಯಾ ಬಳಿ ವ್ಯಕ್ತಿಯೊಬ್ಬ ಸಿಎಎ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ್ದಾನೆ.  ಇದಕ್ಕೆಲ್ಲ ಕಾರಣ ಅನುರಾಗ್ ಠಾಕೂರ್, ಅವರನ್ನು ಬಂಧಿಸಿ ಎಂದು ನೆಟ್ಟಿಗರು ಒತ್ತಾಯಿಸಿದ್ದು ಟ್ವಿಟರ್‌ನಲ್ಲಿ #ArrestAnuragThakur  ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು