ಸೋಮವಾರ, ಸೆಪ್ಟೆಂಬರ್ 16, 2019
26 °C

ಜಮ್ಮು ಪೊಲೀಸರಿಂದ 30 ಕೆಜಿ ಹೆರಾಯಿನ್ ವಶ

Published:
Updated:
Prajavani

ಜಮ್ಮು-ಕಾಶ್ಮೀರ: ಇಲ್ಲಿನ ಹೋಟೆಲ್‌ ಒಂದರ ಮೇಲೆ ದಾಳಿ ನಡೆಸಿರುವ ಜಮ್ಮು-ಕಾಶ್ಮೀರ ಪೊಲೀಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೆಲೆಬಾಳುವ ಸುಮಾರು 30 ಕೆಜಿ ತೂಕದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧಾರದ ಮೇಲೆ ಇಲ್ಲಿನ ರಂಬಾನ್ ಪ್ರದೇಶದ ಹೋಟೆಲ್ ಮೇಲೆ ಜಮ್ಮುವಿನ ಪೊಲೀಸರು ದಾಳಿ ನಡೆಸಿದರು. ಈ ಸಮಯದಲ್ಲಿ ಬ್ಯಾಗ್ ಒಂದರಲ್ಲಿ ಅನುಮಾನಾಸ್ಪದ ವಸ್ತುವನ್ನು ಸಂಗ್ರಹಿಸಿ ಇಟ್ಟಿರುವುದು ಕಂಡು ಬಂತು. ಕೂಡಲೆ ಅದನ್ನು ಪರಿಶೀಲಿಸಿದಾಗ ಮಾದಕ ವಸ್ತು ಎಂಬುದು ಪತ್ತೆಯಾಯಿತು. ಈ ಬಗ್ಗೆ ಹೋಟೆಲ್‌ನ ಸಿಬ್ಬಂದಿ ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡಲಿಲ್ಲ. ವಿಧಿವಿಜ್ಞಾನ ತಜ್ಞರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬ್ಯಾಗನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಇದು ಮಾದಕ ವಸ್ತು ಹೆರಾಯಿನ್ ಎಂಬುದು ಖಚಿತಪಟ್ಟಿದೆ.

ಇಷ್ಟು ಪ್ರಮಾಣದ ಹೆರಾಯಿನ್‌ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳಲಿದ್ದು, ಇದನ್ನು ಎಲ್ಲಿಂದ ತರಲಾಯಿತು, ಇಲ್ಲಿಗೆ ಹೇಗೆ ಸಾಗಿಸಲಾಯಿತು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಈ ಪ್ರದೇಶದ ಎಸ್‌ಎಸ್‌ಪಿ ಅನಿತಾ ಶರ್ಮ ಮಾಧ್ಯಮದವರಿಗೆ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Post Comments (+)