ಕದನ ವಿರಾಮ ಉಲ್ಲಂಘಿಸಿದ ಪಾಕ್‌ ಸೇನೆ: ಯೋಧ ಹುತಾತ್ಮ

ಬುಧವಾರ, ಏಪ್ರಿಲ್ 24, 2019
27 °C

ಕದನ ವಿರಾಮ ಉಲ್ಲಂಘಿಸಿದ ಪಾಕ್‌ ಸೇನೆ: ಯೋಧ ಹುತಾತ್ಮ

Published:
Updated:

ಪೂಂಚ್‌(ಜಮ್ಮು ಕಾಶ್ಮೀರ): ಜಿಲ್ಲೆಯ ಶಾಹ್ಪುರ್‌ ಪ್ರದೇಶದಲ್ಲಿರುವ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ದಾಳಿಗೆ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಹುತಾತ್ಮ ಯೋಧ ಹರಿ ವಾಕೆರ್‌ ರಾಜಸ್ಥಾನದವರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸೇನೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಲಿಲ್ಲ.

ಶನಿವಾರ ಸಂಜೆ 5.30ರ ವೇಳೆಗೆ ಪಾಕ್‌ ಸೇನೆ ದಾಳಿ ನಡೆಸಿತ್ತು. ತಕ್ಕ ತಿರುಗೇಟು ನೀಡಿದ ಭಾರತೀಯ ಸೇನೆ, ನೆರೆ ರಾಷ್ಟ್ರದ ಸೈನಿಕರನ್ನು ಹಿಮ್ಮೆಟ್ಟಿಸಿದೆ ಎಂದು ತಿಳಿಯಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪಾಕ್‌ ಸೈನಿಕರು ಶುಕ್ರವಾರವೂ ಅಪ್ರಚೋದಿತ ದಾಳಿ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !