ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌ ಮೊದಲ ಹಂತದ ಚುನಾವಣೆಯಲ್ಲಿ ಈ ವರೆಗೆ 27.41% ಮತದಾನ

Last Updated 30 ನವೆಂಬರ್ 2019, 6:40 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಜಾರ್ಖಂಡ್‌ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಮತದಾನ ಪ್ರಕ್ರಿಯೆ ಶನಿವಾರ ಬೆಳಗ್ಗೆ 7ಗಂಟೆಗೆ ಆರಂಭವಾಯಿತು.

ಆರು ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮತದಾನನಡೆಯಲಿದೆ. ಈ ಕ್ಷೇತ್ರಗಳಲ್ಲಿ ಸಚಿವರು ಸೇರಿದಂತೆ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರು ಸ್ಪರ್ಧಿಸಿದ್ದಾರೆ.

ಕಣದಲ್ಲಿರುವ 189 ಮಂದಿಯ ಭವಿಷ್ಯವನ್ನು 18,01,356 ಮಹಿಳೆಯರು ಸೇರಿದಂತೆ 37,83,055 ಜನರು ನಿರ್ಧರಿಸಲಿದ್ದಾರೆ.

ಛಾತ್ರಾ, ಗುಮ್ಲಾ, ಬಿಷುಣ್ ಪುರ್, ಲೊಹರ್ ದಾಗ, ಮಾನಿಕಾ, ಲತೇಹಾರ್, ಪಾನ್ಕಿ, ದಾಲ್ಟೊನ್ ಗಂಜ್, ಬಿಶ್ರಾಮ್ ಪುರ್, ಛಾತರೊರ್, ಹುಸೈನಾಬಾದ್, ಗರ್ಹ್ವಾ ಹಾಗೂ ಭವಾನಾಥ್ ಪುರ್‌ ವಿಧಾನಸಭಾ ಕ್ಷೇತ್ರದಲ್ಲಿ 3,906 ಮತಗಟ್ಟೆಗಳನ್ನು ತೆರೆಯಲಾಗಿದೆ.

ಬೆಳಗ್ಗೆ 11 ಗಂಟೆ ಹೊತ್ತಿಗೆ27.41% ಮತದಾನ ನಡೆದಿರುವುದಾಗಿ ಚುನಾವಣೆ ಆಯೋಗ ತಿಳಿಸಿದೆ.

ಸೇತುವೆ ಸ್ಫೋಟಿಸಿದ ನಕ್ಸಲರು

ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿರುವಾಗಲೇ ನಕ್ಸಲರು ಗುಮ್ಲಾ ಜಿಲ್ಲೆಯಲ್ಲಿ ಸೇತುವೆಯೊಂದನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಇದರಿಂದ ಮತದಾನ ಪ್ರಕ್ರಿಯೆಗೂ ತೊಂದರೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಶಶಿ ರಂಜನ್‌ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT