ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ನಾಟಕದಲ್ಲಿ ಹೆಚ್ಚುತ್ತಿದೆ ಬಾಂಗ್ಲಾ ಉಗ್ರ ಸಂಘಟನೆಯ ಪ್ರಭಾವ’

Last Updated 14 ಅಕ್ಟೋಬರ್ 2019, 6:45 IST
ಅಕ್ಷರ ಗಾತ್ರ

ನವದೆಹಲಿ: ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆಜಮಾತ್ ಉಲ್ ಮುಜಾಹಿದ್ದೀನ್ಬಾಂಗ್ಲಾದೇಶ್‌ (ಜೆಎಂಬಿ) ಪ್ರಭಾವ ಕರ್ನಾಟಕದಲ್ಲಿ ಕಂಡು ಬರುತ್ತಿದೆಎಂದುರಾಷ್ಟ್ರೀಯ ತನಿಖಾ ದಳದ(National Investigation Agency) ನಿರ್ದೇಶಕ ವೈ.ಸಿ.ಮೋದಿ ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ನಡೆದ ಭಯೋತ್ಪಾದನಾ ನಿಗ್ರಹ ದಳಗಳ ಸಮಾವೇಶದಲ್ಲಿ ಮಾತನಾಡಿದ ಅವರು,ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಜೆಎಂಬಿ ಸಂಘಟನೆಯ ಚಟುವಟಿಕೆಗಳನ್ನು ಗುರುತಿಸಲಾಗಿದೆ ಎಂದರು.

ವಿವಿಧ ರಾಜ್ಯಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿರುವ ಸಮಾವೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಂದ ಭವಿಷ್ಯದಲ್ಲಿ ದೇಶಕ್ಕೆ ಇರಬಹುದಾದ ಆತಂಕಗಳ ಬಗ್ಗೆ ಅವರು ವಿವರಿಸಿದರು.

ಝಾಕಿರ್ ನಾಯ್ಕ್ (ಸಂಗ್ರಹ ಚಿತ್ರ)
ಝಾಕಿರ್ ನಾಯ್ಕ್ (ಸಂಗ್ರಹ ಚಿತ್ರ)

ಐಎಸ್ ನಂಟಿಗೆಝಾಕಿರ್ ನಾಯ್ಕ್‌ ಭಾಷಣವೇಪ್ರೇರಣೆ

ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್‌) ಉಗ್ರಗಾಮಿ ಸಂಘಟನೆಯೊಂದಿಗೆ ಹೊಂದಿರುವ ನಂಟಿನ ಕಾರಣಕ್ಕೆ ಭಾರತದ ಭದ್ರತಾ ಏಜೆನ್ಸಿಗಳು ಬಂಧಿಸಿರುವ 127 ಮಂದಿಯ ಪೈಕಿ ಬಹುತೇಕರು ಇಸ್ಲಾಮಿಕ್ ಧಾರ್ಮಿಕ ಪ್ರವಚನಕಾರ ಝಾಕಿರ್ ನಾಯ್ಕ್ ಅವರ ಭಾಷಣಗಳಿಂದ ಪ್ರಭಾವಿತರಾಗಿದ್ದರು ಎಂದು ವೈ.ಸಿ.ಮೋದಿ ನುಡಿದರು.

ವಿಚಾರಣೆ ವೇಳೆ ಬಹುತೇಕ ಯುವಕರು ಝಾಕಿರ್ ನಾಯ್ಕ್ ಅವರ ಭಾಷಣಗಳಿಂದ ಪ್ರೇರಣೆ ಪಡೆದಿರುವುದನ್ನು ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾಗಿ ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT