ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ದಾಳಿ: ಭಯೋತ್ಪಾದಕ ಎಡಪಂಥೀಯ ವಿದ್ಯಾರ್ಥಿಗಳ ಕೃತ್ಯ- ರಾಮ್‌ ಮಾಧವ್

Last Updated 11 ಜನವರಿ 2020, 13:47 IST
ಅಕ್ಷರ ಗಾತ್ರ

ವಡೋದರ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಹಿಂಸಾಚಾರವು, ಅಲ್ಪಸಂಖ್ಯೆಯಲ್ಲಿರುವ ‘ಭಯೋತ್ಪಾದಕ ಎಡಪಂಥೀಯ’ ವಿದ್ಯಾರ್ಥಿಗಳ ಕೃತ್ಯವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್ ಶನಿವಾರ ಆರೋಪಿಸಿದ್ದಾರೆ.

ಈ ವಿದ್ಯಾರ್ಥಿಗಳು ದಶಕಗಳಿಂದ ಜೆಎನ್‌ಯುನಲ್ಲಿರುವ ಸಾವಿರಾರು ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ಅಡ್ಡಿಯಾಗಿದ್ದಾರೆ. ಜನವರಿ 5ರಂದು ನಡೆದ ಹಿಂಸಾಚಾರವು ‘ಎಡಪಂಥೀಯರು ಮತ್ತು ಅವರ ಬೆಂಬಲಿಗರ ಪಿತೂರಿ’ಯಾಗಿದೆ ಎಂದೂ ಅವರು ದೂರಿದ್ದಾರೆ.

‘ಜೆಎನ್‌ಯುನಲ್ಲಿ ಎಡಪಂಥೀಯರ ಭಯೋತ್ಪಾದನೆಯಿಂದಾಗಿ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳು ಹಿಂಸೆಗೊಳಗಾಗಿದ್ದರೆ. ಈಗ ಆಗಿರುವ ಹಿಂಸಾಚಾರವೂ ಅದರ ಪರಾಕಾಷ್ಠೆಯಾಗಿದೆ. ಕೆಲವು, ಸಣ್ಣ ಸಂಖ್ಯೆಯಲ್ಲಿರುವ ಭಯೋತ್ಪಾದಕ ಎಡಪಂಥೀಯ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನಾ ಹಕ್ಕುಗಳಿಗೆ ಧಕ್ಕೆ ತರುತ್ತಿದ್ದಾರೆ’ಎಂದು ಮಾಧವ್ ದೂಷಿಸಿದರು.

ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ಕುರಿತು ಎಡಪಂಥೀಯ ಸಂಘಟನೆಗಳು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪರಸ್ಪರರನ್ನು ದೂಷಿಸಿವೆ.

ಜಮ್ಮು ಮತ್ತು ಕಾಶ್ಮೀರ ಕುರಿತು ಕೇಳಲಾದ ಪ್ರಶ್ನೆಗೆ, ‘ಅಲ್ಲೀಗ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಅಂತರ್ಜಾಲ ಸೇವೆಯನ್ನೂ ಪುನಃ ಸ್ಥಾಪಿಸಲಾಗಿದೆ. ಅಂತೆಯೇ ಬಂಧನದಲ್ಲಿದ್ದ ಕೆಲ ಸ್ಥಳೀಯ ನಾಯಕರನ್ನೂ ಬಿಡುಗಡೆ ಮಾಡಲಾಗಿದೆ. ಉಳಿದ ನಾಯಕರನ್ನು ಸರ್ಕಾರ ಹಂತಹಂತವಾಗಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ’ ಎಂದು ರಾಮ್‌ಮಾಧವ್ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT