ಮಂಗಳವಾರ, ಜನವರಿ 28, 2020
17 °C

ವಿದ್ಯಾರ್ಥಿಗಳ ಬಗ್ಗೆ ಜೆಎನ್‌ಯುಗೇ ಮಾಹಿತಿ ಇಲ್ಲ!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಡಳಿತ ಕಚೇರಿಯ ಬಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಿರುವ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯಕ್ಕೆ, ದೆಹಲಿ ಹೈಕೋರ್ಟ್‌ ಛೀಮಾರಿ ಹಾಕಿದೆ. 

ದೂರಿನಲ್ಲಿ ಉಲ್ಲೇಖಿಸಲಾಗಿರುವ ವಿದ್ಯಾರ್ಥಿಗಳ ಮಾಹಿತಿ, ಎಷ್ಟು ವರ್ಷದಿಂದ ಕ್ಯಾಂಪಸ್‌ನಲ್ಲಿದ್ದಾರೆ ಮುಂತಾದ ವಿವರ ನೀಡುವಂತೆ ನ್ಯಾಯಮೂರ್ತಿ ಎ.ಕೆ.ಚಾವ್ಲಾ ಜೆಎನ್‌ಯುಗೆ ನಿರ್ದೇಶಿಸಿದ್ದರು. ಈ ವಿವರ ನೀಡಲು ಜೆಎನ್‌ಯು ರಿಜಿಸ್ಟ್ರಾರ್‌ ಮತ್ತು ಅಧಿಕಾರಿಗಳು ವಿಫಲರಾದರು. ‘ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿಯು ವಿಶ್ವವಿದ್ಯಾಲಯಕ್ಕೇ ತಿಳಿದಿಲ್ಲ. ಇದು ‘ಆಘಾತಕಾರಿ’ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. 

‘ದೂರು ನೀಡುವ ನಿಮಗೇ ವಿದ್ಯಾರ್ಥಿಗಳ ಮಾಹಿತಿ ಇಲ್ಲ. ಈ ವಿದ್ಯಾರ್ಥಿಗಳ ಪೈಕಿ ಗೀತಾ ಕುಮಾರಿ ಎಂಬಾಕೆಯ ವಿರುದ್ಧ ಕಳೆದ ವರ್ಷವೂ ನ್ಯಾಯಾಂಗ ನಿಂದನೆ ದೂರು ದಾಖಲಾಗಿತ್ತು. ನಿಮಗೆ ಕೇವಲ ವಿದ್ಯಾರ್ಥಿಗಳು ಉಳಿದುಕೊಂಡಿರುವ ಕೊಠಡಿಗಳ ಸಂಖ್ಯೆಯಷ್ಟೇ ತಿಳಿದಿದೆ’ ಎಂದು ಛೀಮಾರಿ ಹಾಕಿತು. ಆಡಳಿತ ಕಚೇರಿಯ 100 ಮೀ.ಅಂತರದಲ್ಲಿ ಯಾವುದೇ ಪ್ರತಿಭಟನೆ ನಡೆಸಬಾರದು ಎಂದು 2017ರಲ್ಲಿ ನ್ಯಾಯಾಲಯವು ವಿದ್ಯಾರ್ಥಿಗಳಿಗೆ ನಿರ್ದೇಶಿಸಿತ್ತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು