ಭಾನುವಾರ, ಜನವರಿ 26, 2020
23 °C
ಜೆಎನ್‌ಯುನಲ್ಲಿ ನಡೆದ ದಾಂದಲೆ

ಮುಸುಕುಧಾರಿ ಮಹಿಳೆ ಸೇರಿ 49 ಮಂದಿಗೆ ನೋಟಿಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಜೆಎನ್‌ಯು ಕ್ಯಾಂಪಸ್‌ನಲ್ಲಿ ಕಳೆದ ಭಾನುವಾರ ನಡೆದ ದಾಂದಲೆಗೆ ಸಂಬಂಧಿಸಿ ದೆಹಲಿ ಪೊಲೀಸರು 49 ಮಂದಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಟಿ.ವಿ.ವಾಹಿನಿಯೊಂದು ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದ ವಿ.ವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಅಕ್ಷತ್ ಅವಸ್ತಿ ಮತ್ತು ರೋಹಿತ್‌ ಶಾ ಅವರಿಗೂ ನೋಟಿಸ್‌ ಜಾರಿಯಾಗಿದೆ.

‘ಮೊದಲು ಕರೆ ಮಾಡಿದಾಗ ಈ ಇಬ್ಬರೂ ತನಿಖೆಗೆ ಸಹಕರಿಸಲಾಗುವುದು ಎಂದಿದ್ದರು. ಈಗ ಇಬ್ಬರು ಫೋನ್‌ ಸ್ವಿಚ್ ಆಫ್‌ ಮಾಡಿಕೊಂಡಿದ್ದಾರೆ. ಅವರ ನೆಲೆಯನ್ನು ಪತ್ತೆ ಮಾಡಿ, ದಾಂದಲೆಯಲ್ಲಿ ಅವರ ಪಾತ್ರ ಕುರಿತಂತೆ ತನಿಖೆಗೆ ಒಳಪಡಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ. 

ಕೋಮಲ್‌ ಶರ್ಮಾ ದೌಲತ್‌ ರಾಂ ಕಾಲೇಜಿನ ವಿದ್ಯಾರ್ಥಿನಿ. ಇವರ ಮೊಬೈಲ್‌ ಫೋನ್‌ ಶನಿವಾರ
ದಿಂದ ಸ್ವಿಚ್‌ ಆಫ್‌ ಆಗಿದೆ. ಇವರನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಶಂಕಿತರಾಗಿ ಗುರುತಿಸಿರುವ ವಿಕಾಸ್‌ ಪಟೇಲ್‌ ಮತ್ತು ಯೋಗೇಂದ್ರ ಭಾರದ್ವಾಜ್‌ ಅವರು ಆರ್‌ಎಸ್‌ಎಸ್‌ ಬೆಂಬಲಿತ ಎಬಿವಿಪಿ ಸದಸ್ಯರು ಎಂದು ಪೊಲೀಸ್‌ ಮೂಲಗಳು ಸ್ಪಷ್ಟಪಡಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು