ಯೋಧರಿಗೆ ಅವಿಶ್ರಾಂತ ದುಡಿಮೆ: ಕಳವಳ

7

ಯೋಧರಿಗೆ ಅವಿಶ್ರಾಂತ ದುಡಿಮೆ: ಕಳವಳ

Published:
Updated:

ನವದೆಹಲಿ: ಕೇಂದ್ರ ಮೀಸಲು ಪೊಲೀಸ್‌ ಪಡೆಯ ಯೋಧರನ್ನು (ಸಿಆರ್‌ಪಿಎಫ್‌) ದೀರ್ಘಾವಧಿ ಕೆಲಸಕ್ಕೆ ನಿಯೋಜಿಸುತ್ತಿರುವುದಕ್ಕೆ ಜಂಟಿ ಸಂಸದೀಯ ಸಮಿತಿ ಆತಂಕ ವ್ಯಕ್ತಪಡಿಸಿದೆ. ವಾರದ ರಜೆ ಮತ್ತು ಇತರ ರಜೆಗಳನ್ನು ಅವರಿಗೆ ನೀಡದೇ ಇರುವುದು ಆರೋಗ್ಯ
ಕರವಲ್ಲ ಮತ್ತು ಸಮರ್ಥನೀಯವೂ ಅಲ್ಲ ಎಂದು ಹೇಳಿದೆ.

ಸಿಬ್ಬಂದಿಗೆ ಅತ್ಯಗತ್ಯವಾದ ವಿಶ್ರಾಂತಿ ನೀಡಲು ಮತ್ತು ಅವರ ಕರ್ತವ್ಯದ ಅವಧಿಯನ್ನು ಸಹ್ಯವಾಗಿಸಲು ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಪಿ.ಚಿದಂಬರಂ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !