ಶನಿವಾರ, ಏಪ್ರಿಲ್ 4, 2020
19 °C

ಪ್ರಧಾನಿಯನ್ನು ಹೊಗಳಿದ ನ್ಯಾ.ಅರುಣ್ ಮಿಶ್ರಾ; ಬಾರ್ ಅಸೋಸಿಯೇಷನ್ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಂತರರಾಷ್ಟ್ರೀಯ ಕಾನೂನು ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ನ್ಯಾಯಮುರ್ತಿ ಅರುಣ್‌ ಮಿಶ್ರಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿರುವುದನ್ನು ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಶ್ನಿಸಿದೆ.

‘ಬಹುಮುಖ ಪ್ರತಿಭೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಜಾಗತಿಕವಾಗಿ ಚಿಂತಿಸುತ್ತಾರೆ ಮತ್ತು  ಸ್ಥಳೀಯವಾಗಿ ಸ್ಪಂದಿಸುತ್ತಾರೆ (Thinks globally and acts locally) ಎಂದು ನ್ಯಾಯಮೂರ್ತಿ ಮಿಶ್ರಾ ಅವರು ಸಮಾರಂಭದಲ್ಲಿ ಹೇಳಿದ್ದರು.

ನ್ಯಾಯಮೂರ್ತಿ ಮಿಶ್ರಾ ಅವರು ಕಾರ್ಯಕ್ರಮದ ವಂದನಾರ್ಪಣೆಯಲ್ಲಿ ಪ್ರಧಾನಿಯವರನ್ನು ಅತಿಯಾಗಿ ಹೊಗಳಿದ್ದಾರೆ ಎಂದು ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಅಭಿಪ್ರಾಯಪಟ್ಟಿದೆ.

‘ಆಳುವವರ ವಿರುದ್ಧ ದೂರುಗಳು ಬಂದಾಗ ಸಂವಿಧಾನ ಮತ್ತು ಕಾನೂನನ್ನು ಮಾನದಂಡವಾಗಿರಿಸಿಕೊಂಡು ಸುಪ್ರೀಂ ಕೊರ್ಟ್‌ನ ನ್ಯಾಯಮೂರ್ತಿಗಳು ಕ್ರಮ ಕೈಗೊಳ್ಳಬೇಕು. ನ್ಯಾಯಾಂಗ ನಿಷ್ಪಕ್ಷಪಾತವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಜನರ ನಂಬಿಕೆಯನ್ನು ಇಂಥ ಹೇಳಿಕೆಗಳು ದುರ್ಬಲಗೊಳಿಸುವ ಸಾಧ್ಯತೆ ಇದೆ’ ಎಂದು ಬಾರ್ ಅಸೋಸಿಯೇಷನ್ ಅಭಿಪ್ರಾಯಪಟ್ಟಿದೆ.

ಆಡಳಿತಾಂಗ ಮತ್ತು ಶಾಸಕಾಂಗದ ನಡುವೆ ಗೌರವಯುತ ಅಂತರವನ್ನು ಕಾಯ್ದುಕೊಳ್ಳಬೇಕಾದದು ನ್ಯಾಯಮೂರ್ತಿಗಳ ಮೂಲ ಕರ್ತವ್ಯ. ನ್ಯಾಯ ಮತ್ತು ಪಾರದರ್ಶಕತೆಯನ್ನು ಜನಸಾಮಾನ್ಯರು ನ್ಯಾಯಾಲಯದಿಂದ ನಿರೀಕ್ಷಿಸುತ್ತಾರೆ ಎಂದು ಬಾರ್ ಅಸೋಸಿಯೇಷನ್ ಹೇಳಿದೆ.

ಸ್ವಾತಂತ್ರ್ಯ ನ್ಯಾಯಾಂಗ ವ್ಯವಸ್ಥೆ ಬಲಪಡಿಸಲು ನಿಟ್ಟಿನಲ್ಲಿ ನಿರಂತರ ಎಚ್ಚರಿಕೆವಹಿಸಬೇಕು ಎಂದು ಬಾರ್ ಅಸೋಸಿಯೇಷನ್ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು