ಶುಕ್ರವಾರ, ಆಗಸ್ಟ್ 6, 2021
22 °C
#JusticeForGeorgeFloyd ಅಭಿಯಾನಕ್ಕೆ ಬೆಂಬಲ

ಜನಾಂಗೀಯ ದ್ವೇಷದ ವಿರುದ್ಧ ಪ್ರಿಯಾಂಕಾ ದಂಪತಿ ಆಕ್ರೋಶ

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

Prajavani

ಜನಾಂಗೀಯ ದ್ವೇಷದ ಹಿನ್ನೆಲೆ ಅಮೆರಿಕದಲ್ಲಿ ಪೊಲೀಸ್‌ ಅಧಿಕಾರಿಯಿಂದ ಹತನಾದ ಜಾರ್ಜ್‌ ಫ್ಲಾಯ್ಡ್‌ಗೆ ನ್ಯಾಯ ಸಿಗಬೇಕೆಂದು ನಡೆಸುತ್ತಿರುವ ಆಂದೋಲನಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್‌ ಜೋನಸ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

’ನನಗೆ ಉಸಿರಾಡಲು ಆಗುತ್ತಿಲ್ಲ. ನನ್ನನು ಬಿಟ್ಟುಬಿಡಿ‘ ಎಂದು ಗೋಗರೆಯುತ್ತಿರುವ ಜಾರ್ಜ್‌ ಫ್ಲಾಯ್ಡ್‌, ಆತನ ಕುತ್ತಿಗೆ ಮೇಲೆ ಏಳು ನಿಮಿಷ ಮೋಣಕಾಲೂರಿ ನಿಂತ ಪೊಲೀಸ್‌ ಅಧಿಕಾರಿ ಆತನನ್ನು ಸಾಯಿಸುವವರೆಗೂ ಬಿಟ್ಟಿರಲಿಲ್ಲ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಜಾರ್ಜ್‌ ಫ್ಲಾಯ್ಡ್‌ ಪರವಾಗಿ ಈಗ ಅಮೆರಿಕದೆಲ್ಲೆಡೆ ಪ್ರತಿಭಟನೆ ಪ್ರಾರಂಭವಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತೀವ್ರ ಚರ್ಚೆಯಾಗಿದ್ದು #BlackLivesMatter ಹಾಗೂ #JusticeForGeorgeFloyd ಎಂಬ ಅಭಿಯಾನ ನಡೆಯುತ್ತಿದ್ದು, ಇದಕ್ಕೆ ಜೋನಸ್‌ ದಂಪತಿ ಬೆಂಬಲ ಸೂಚಿಸಿದ್ದಾರೆ. 

’ಈ ಘಟನೆಯಿಂದ ನನಗೆ ಹಾಗೂ ಪ್ರಿಯಾಂಕಾ ಹೃದಯ ಭಾರವಾಗಿದೆ. ಪ್ರಪಂಚದಾದ್ಯಂತ ಇರುವ ಅಸಮಾನತೆ ವಿರುದ್ಧ ನಾವು ಹೋರಾಡಬೇಕು. ವರ್ಣಭೇದ, ಧರ್ಮಾಂಧತೆ ಹೆಚ್ಚಿದೆ. ನಾವು ಮೌನವಾಗಿದ್ದರೆ ಇದು ಇನ್ನೂ ಹರಡುತ್ತದೆ. ಇದಕ್ಕೆ ನಾವು ಅನುವು ಮಾಡಿಕೊಡಬಾರದು. ಜಾರ್ಜ್‌ ಫ್ಲಾಯ್ಡ್‌ ಕುಟುಂಬದೊಂದಿಗೆ ನಾವಿದ್ದೇವೆ‘ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಇನ್‌ಸ್ಟಾಗ್ರಾಂ ಸ್ಟೋರಿಗೆ ಬಾಲಿವುಡ್‌ ಮಂದಿಯೂ ಪ್ರತಿಕ್ರಿಯಿಸಿದ್ದು, ಕರಣ್ ಜೋಹರ್, ವಿಕ್ಕಿ ಕೌಶಲ್, ಸಾರಾ ಅಲಿ ಖಾನ್, ಇಶಾನ್ ಖಟ್ಟರ್, ತಾರಾ ಸುತಾರಿಯಾ ಅವರೂ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.  

'ಅಮೆರಿಕದಲ್ಲಿ ಹರಿದಾಡುತ್ತಿರುವ ಈ 'ವರ್ಣ ದ್ವೇಷ' ಅಳಿಯಬೇಕಿದೆ. ಯಾರೂ ಸಹ ತಮ್ಮ ಚರ್ಮದ ಬಣ್ಣದ ಕಾರಣಕ್ಕೆ ಮತ್ತೊಬ್ಬ ವ್ಯಕ್ತಿಯಿಂದ ಹತನಾಗಬಾರದು' ಎಂದು ನೋವಿನಿಂದ ಬರೆದಿದ್ದಾರೆ ಪ್ರಿಯಾಂಕಾ ಚೋಪ್ರಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು