ಭಾನುವಾರ, ಮೇ 9, 2021
24 °C

ಸೋನಿಯಾ ಗಾಂಧಿಗೆ ಸಿಂಧಿಯಾ ಸಲ್ಲಿಸಿದ ರಾಜೀನಾಮೆ ಪತ್ರದಲ್ಲೇನಿದೆ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Jyotiraditya Scindia

ಭೋಪಾಲ: ಮಧ್ಯಪ್ರದೇಶ ರಾಜಕೀಯವು ಮಹತ್ವದ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ನೇತಾರ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಿಗೇ, 18 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದ ಅವರನ್ನು ಕಾಂಗ್ರೆಸ್ ಉಚ್ಚಾಟಿಸಿದೆ.

ಇದನ್ನೂ ಓದಿ: 

ರಾಜೀನಾಮೆ ಪತ್ರದಲ್ಲಿ ಏನಿದೆ?

ಸಿಂಧಿಯಾ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದ ಸಾರಾಂಶ ಇಲ್ಲಿದೆ:

 

"ಕಳೆದ 18 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕೆಲಸ ಮಾಡಿದ್ದು, ಈಗ ಮುಂದೆ ಸಾಗಲು ನನಗಿದು ಸಕಾಲ. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಮತ್ತು ನಿಮಗೆ ಚೆನ್ನಾಗಿ ತಿಳಿದಿರುವಂತೆ, ಕಳೆದ ಒಂದು ವರ್ಷದಿಂದಲೇ ಈ ಪ್ರಕ್ರಿಯೆಯು ನಿಧಾನವಾಗಿಯೇ ಸಾಗುತ್ತಿತ್ತು.

ಆರಂಭದಿಂದಲೇ ನನ್ನ ಗುರಿ ಮತ್ತು ಉದ್ದೇಶ ಒಂದೇ. ನನ್ನ ರಾಜ್ಯದ ಮತ್ತು ದೇಶದ ಜನರ ಸೇವೆ ಮಾಡುವುದು. ಈ ಪಕ್ಷದಲ್ಲಿದ್ದುಕೊಂಡು ಇದನ್ನು ಮಾಡುವುದು ಸಾಧ್ಯವೇ ಇಲ್ಲ ಎಂಬುದು ನನಗೆ ಮನದಟ್ಟಾಗಿದೆ. ನನ್ನ ಜನ ಮತ್ತು ನನ್ನ ಕಾರ್ಯಕರ್ತರ ಆಶೋತ್ತರಗಳನ್ನು ಪ್ರತಿಬಿಂಬಿಸಲು ಮತ್ತು ಈಡೇರಿಸಲು, ನಾನು ಹೊಸ ಪಥದಲ್ಲಿ ಸಾಗುವುದೇ ಸೂಕ್ತ ಎಂದು ನನ್ನ ಭಾವನೆ.

ದೇಶ ಸೇವೆ ಮಾಡಲು ನನಗೆ ವೇದಿಕೆಯನ್ನು ಒದಗಿಸಿದ ನಿಮಗೆ ಮತ್ತು ನಿಮ್ಮ ಮೂಲಕ ಪಕ್ಷದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.
ಧನ್ಯವಾದಗಳೊಂದಿಗೆ,
ಜ್ಯೋತಿರಾದಿತ್ಯ ಸಿಂಧಿಯಾ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು