ನವದೆಹಲಿ: ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆ ಸಂದರ್ಭ 'ಕಾಗಜ್ ನಹೀಂ ದಿಖಾಯೇಂಗೇ' (ದಾಖಲೆಪತ್ರ ತೋರಿಸುವುದಿಲ್ಲ) ಎಂದು ಘೋಷಣೆ ಕೂಗಿದವರಿಗೆ ಸೋಲಾಗಲಿದೆ ಎಂದು ಹೇಳಿರುವ ಬಿಜೆಪಿ ಮಾಜಿ ಸಂಘಟನಾ ಕಾರ್ಯದರ್ಶಿರಾಮ್ ಲಾಲ್, ಮತದಾನಕ್ಕೆ ಹೋಗುವಾಗ ಅಗತ್ಯ ದಾಖಲೆಗಳನ್ನು ಒಯ್ಯಿರಿ ಎಂದು ದೆಹಲಿ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.

ನಿರ್ಮಾಣ್ ಭವನ್ ಬೂತ್‌ನಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗ ಮಾತನಾಡಿದ ಅವರು, "ಮತದಾರರಿಗೆ ನನ್ನ ಸಂದೇಶವೇ ಇದು. ಇವತ್ತು ನಿಮ್ಮ ದಾಖಲೆಪತ್ರವನ್ನು ಮರೆಯದೇ ಒಯ್ಯಿರಿ ಮತ್ತು ಅಗತ್ಯವಾಗಿ ತೋರಿಸಿ" ಎಂದರು.

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಪ್ರತಿಭಟಿಸಿದ ಹಲವಾರು ಮಂದಿ "ಕಾಗಜ್ ನಹೀಂ ದಿಖಾಯೇಂಗೇ" (ಸರ್ಕಾರಕ್ಕೆ ನಮ್ಮ ದಾಖಲೆ ಪತ್ರಗಳನ್ನು ತೋರಿಸುವುದಿಲ್ಲ) ಎಂದು ಘೋಷಣೆ ಕೂಗಿದ್ದರು.

ಇಂದು ದಾಖಲೆ ಪತ್ರಗಳನ್ನು ತೋರಿಸದವರ ಮನಸ್ಥಿತಿಗೆ ಸೋಲಾಗುತ್ತದೆ ಮತ್ತು ಯಾರು ದಾಖಲೆಗಳನ್ನು ತೋರಿಸುತ್ತಾರೋ ಅವರಿಗೆ ಜಯವಾಗುತ್ತದೆ ಎಂದವರು ಹೇಳಿದರು.

ಬಿಜೆಪಿ ಹಿರಿಯ ಮುಖಂಡ ಶ್ಯಾಮ್ ಜಾಜು ಮಾತನಾಡಿ, ದೆಹಲಿಯ ಶಾಹೀನ್‌ಬಾಗ್‌ನಲ್ಲಿ ಸಿಎಎ-ವಿರೋಧೀ ಪ್ರತಿಭಟನೆಗಳಿಗೆ ಹಣಕಾಸು ನೆರವು ನೀಡಿದವರಿಗೆ ಮತ್ತು ಬೆಂಬಲಿಸಿದವರಿಗೆ ದೆಹಲಿಯ ಮತದಾರರು ಪಾಠ ಕಲಿಸುತ್ತಾರೆ ಎಂದರು.

ಆಮ್ ಆದ್ಮೀ ಪಾರ್ಟಿಯ ಅಮಾನತುಲ್ಲಾ ಖಾನ್ ಶಾಹೀನ್ ಬಾಗ್ ಪ್ರತಿಭಟನೆಗೆ ಹಣಕಾಸು ನೆರವು ನೀಡಿದ್ದು, ದೆಹಲಿಯ ಉಪಮುಖ್ಯಮಂತ್ರಿ ಅದನ್ನು ಬೆಂಬಲಿಸಿದ್ದರು ಎಂದು ಶ್ಯಾಮ್ ಜಾಜು ಹೇಳಿದರು.

ಚುನಾವಣಾ ಫಲಿತಾಂಶವು ಫೆ.11ರ ಸೋಮವಾರ ಪ್ರಕಟವಾಗಲಿದೆ. 70 ಸದಸ್ಯರುಳ್ಳ ದೆಹಲಿ ವಿಧಾನಸಭೆಗೆ ನಡೆದಹಿಂದಿನ ಚುನಾವಣೆಯಲ್ಲಿ ಆಮ್ ಆದ್ಮೀ ಪಕ್ಷಕ್ಕೆ 67 ಸ್ಥಾನಗಳು ಹಾಗೂ ಬಿಜೆಪಿಗೆ 3 ಸ್ಥಾನಗಳು ಲಭ್ಯವಾಗಿದ್ದರೆ, ಕಾಂಗ್ರೆಸ್‌ಗೆ ಯಾವುದೇ ಕ್ಷೇತ್ರವೂ ಸಿಕ್ಕಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.