ಎಂಜಿನಿಯರ್‌ ಗಡಿಪಾರು

7

ಎಂಜಿನಿಯರ್‌ ಗಡಿಪಾರು

Published:
Updated:

ಶ್ರೀನಗರ: ನಿಷೇಧಿತ ಉಗ್ರ ಸಂಘಟನೆ ಐಎಸ್‌ ಪರ ಒಲವು ಹೊಂದಿದ್ದ ಕಾಶ್ಮೀರದ ವ್ಯಕ್ತಿಯನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಯುಎಇ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 

ಶ್ರೀನಗರ ಹೊರವಲಯದ ಛಟ್ಟಾಟಬಾಲ್‌ ಪ್ರದೇಶದ ನಿವಾಸಿಯಾದ ಇರ್ಫಾನ್‌ ಅಹ್ಮದ್‌ ಝರ್ಗರ್‌ (36) ಗಡಿಪಾರಾದ ವ್ಯಕ್ತಿ. ಎನ್‌ಐಎ ಸೇರಿ ಹಲವು ತನಿಖಾ ಸಂಸ್ಥೆಗಳು ಇವನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದವು. ಆಗಸ್ಟ್‌ 14ರಂದು ಕೊಲ್ಲಿ ರಾಷ್ಟ್ರದಿಂದ ಇವನನ್ನು ಗಡಿಪಾರು ಮಾಡಲಾಗಿದ್ದು, ವಿಚಾರಣೆಗಾಗಿ ಜಮ್ಮು–ಕಾಶ್ಮೀರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈನಲ್ಲಿ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಝರ್ಗರ್‌, ಸಾಮಾಜಿಕ ಮಾಧ್ಯಮಗಳಲ್ಲಿ ಐಸಿಸ್‌ ಪರವಾದ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದ. ಅಲ್ಲದೆ, ಸಿರಿಯಾದಲ್ಲಿ ಐಸಿಸ್‌ ಕೈಗೊಳ್ಳುತ್ತಿರುವ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದ. ಅಲ್ಲದೆ, ತನಿಖಾ ಸಂಸ್ಥೆಗಳ ನಡೆಯನ್ನು ಪ್ರಶ್ನಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ. 

ಆದರೆ, ಝರ್ಗರ್‌ನ ಸಂಬಂಧಿಯೊಬ್ಬರು ಈ ಬಗ್ಗೆ ಟ್ವೀಟ್‌ ಮಾಡಿದ್ದು, ‘ಝರ್ಗರ್‌ ನಿರಪರಾಧಿ. ಈ ವಿಷಯದಲ್ಲಿ ನಮ್ಮ ನೆರವಿಗೆ ಬನ್ನಿ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ. ದುಬೈನಲ್ಲಿರುವ ಭಾರತದ ರಾಯಭಾರ ಕಚೇರಿಗೆ ಸಂಪರ್ಕಿಸಿ ನೆರವು ನೀಡಲು ಸೂಚಿಸುವುದಾಗಿ ಸುಷ್ಮಾ ಭರವಸೆ ನೀಡಿದ್ದಾರೆ. 

ಆದರೆ, ದುಬೈನ ವಿದೇಶಾಂಗ ಅಧಿಕಾರಿಗಳು ಇದನ್ನು ತಿರಸ್ಕರಿಸಿದ್ದು, ಝರ್ಗರ್‌ ವಿಷಯದಲ್ಲಿ ನಾವು ಕೈಗೊಳ್ಳುವ ಆಂತರಿಕ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಅರ್ಜಿಯನ್ನು ಪುರಸ್ಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !