ಮಂಗಳವಾರ, ಏಪ್ರಿಲ್ 7, 2020
19 °C

ಕೇರಳದಲ್ಲಿ ಹಕ್ಕಿಜ್ವರ: ಕೋಳಿ, ಮೊಟ್ಟೆ ನಾಶ ಮಾಡಲು ಸರ್ಕಾರ ಆದೇಶ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮಲ್ಲಪುರಂ(ಕೇರಳ): ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದ ಕೇರಳದಲ್ಲೀಗ ಹಕ್ಕಿ ಜ್ವರ ಅಲ್ಲಿನ ಜನರನ್ನು ತಲ್ಲಣಗೊಳಿಸಿದ್ದು, ಸರ್ಕಾರ ಹಕ್ಕಿಜ್ವರ ಕಾಣಿಸಿಕೊಂಡ ಸ್ಥಳದ 1ಕಿಲೋ ಮೀಟರ್ ಸುತ್ತಮುತ್ತಲಿನ ಕೋಳಿಫಾರಂ, ಕೋಳಿ ಮೊಟ್ಟೆ, ಪಾರಿವಾಳ ಸೇರಿದಂತೆ ಇತರೆ ಪಕ್ಷಿಗಳನ್ನು ತೆರವುಗೊಳಿಸಬೇಕೆಂದು ಆದೇಶ ಹೊರಡಿಸಿದೆ.

ಮಲ್ಲಪುರಂನ ಪರಪ್ಪನಂಗಡಿ ಸುತ್ತಮುತ್ತ ಎರಡು ಹಕ್ಕಿಜ್ವರ ಪ್ರಕರಣಗಳು ಪತ್ತೆಯಾಗಿವೆ. ಈ ಕಾರಣದಿಂದಾಗಿ ಈ ಪ್ರದೇಶದ ಸುತ್ತಮುತ್ತಲಿನ ಕೋಳಿಫಾರಂಗಳಲ್ಲಿದ್ದ ಕೋಳಿಗಳನ್ನು ನಾಶಪಡಿಸಲಾಗಿದೆ.

ಸ್ಥಳೀಯ ಆರೋಗ್ಯಾಧಿಕಾರಿಗಳು 10 ತಂಡಗಳನ್ನು ತೆರವುಗೊಳಿಸುವ ಕಾರ್ಯಕ್ಕಾಗಿ ನಿಯೋಜಿಸಿದೆ. ಈ ತಂಡಗಳು ಎಲ್ಲಾ ಕೋಳಿಫಾರಂಗಳನ್ನು ತಪಾಸಣೆ ಮಾಡಿ ಕೋಳಿಗಳು, ಮೊಟ್ಟೆಗಳು, ನಾಟಿ ಕೋಳಿಗಳು, ಪಾರಿವಾಳಗಳನ್ನು ಪತ್ತೆ ಹಚ್ಚಿ ಅವುಗಳ ಗೂಡುಗಳನ್ನೂ ನಾಶಪಡಿಸುತ್ತಿದ್ದಾರೆ. 

 

ಕೇರಳ ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಎಲ್ಲೆಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆಯೋ ಆ ಪ್ರದೇಶಗಳ ಸುತ್ತಮುತ್ತಲಿನ ಕೋಳಿಫಾರಂಗಳನ್ನು ನಾಶಪಡಿಸಲಾಗುತ್ತಿದೆ. ಕರ್ನಾಟಕ-ಕೇರಳ ಗಡಿಭಾಗವಾದ ಮೈಸೂರು, ಮಡಿಕೇರಿ, ಕಾಸರಗೋಡು ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ.

ಇದನ್ನೂ ಓದಿ: ಕೋಳಿಗಳ ಸಾವು: ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ಹಕ್ಕಿಜ್ವರ

ಹಕ್ಕಿಜ್ವರ ಭೀತಿಯಿಂದ ಜನರು ಚಿಕನ್ ತಿನ್ನುವುದನ್ನು ಕಡಿಮೆ ಮಾಡಿರುವ ಕಾರಣ ಕರ್ನಾಟಕದಲ್ಲಿ ಕೋಳಿ ದರ ತೀರ ಕಡಿಮೆಯಾಗಿದೆ. ಇದರಿಂದಾಗಿ ಕೋಳಿ ಸಾಕಾಣಿಕೆದಾರರು ನಷ್ಟ ಅನುಭವಿಸುತ್ತಿದ್ದು, ರಾಜ್ಯದ ಕೋಳಿಸಾಕಾಣಿಕೆದಾರನೊಬ್ಬ ನಷ್ಟ ಅನುಭವಿಸಿದ ಕಾರಣ ಕೋಳಿಗಳನ್ನು ಗುಂಡಿ ತೆಗೆದು ಹೂತು ಹಾಕಿರುವ ವಿಡಿಯೋ ವೈರಲ್ ಆಗಿತ್ತು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು