ಶುಕ್ರವಾರ, ಜೂಲೈ 3, 2020
22 °C

ಕೇರಳ: ಕರ್ತವ್ಯದ ಕೊನೆಯ ದಿನ ಕಚೇರಿ ನೆಲದಲ್ಲೇ ಮಲಗಿದ ಐಪಿಎಸ್‌ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Kerala IPS officer

ತಿರುವನಂತಪುರ: ಕರ್ತವ್ಯದ ಕೊನೆಯ ದಿನ, ನಿವೃತ್ತಿಗೂ ಮುನ್ನ ಕೇರಳದ ಹಿರಿಯ ಐಪಿಎಸ್‌ ಅಧಿಕಾರಿ ಜೇಕಬ್‌ ಥಾಮಸ್ ಅವರು ಕಚೇರಿಯ ನೆಲದಲ್ಲೇ ಮಲಗಿದ್ದಾರೆ.

1985ರ ಬ್ಯಾಚ್‌ನ ಅಧಿಕಾರಿಯಾಗಿರುವ ಥಾಮಸ್‌, ಬೆಡ್‌ಶೀಟ್‌ ಹಾಸಿರುವ ತಮ್ಮ ಕಚೇರಿಯ ಚಿತ್ರವನ್ನು ಭಾನುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಜೊತೆಗೆ ಕೊಡಲಿಯನ್ನು ಹಿಡಿದಿರುವ ಚಿತ್ರವನ್ನೂ ಅಪ್‌ಲೋಡ್‌ ಮಾಡಿರುವ ಥಾಮಸ್‌, ‘ಪರಶುರಾಮನ ಕೊಡಲಿಯೊಂದಿಗೆ ಜೀವನದ ಮುಂದಿನ ಪಾತ್ರವನ್ನು ಆರಂಭಿಸುತ್ತೇನೆ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಭಾರತದ ಭೂಪ್ರದೇಶಗಳನ್ನು ತನ್ನ ನಕಾಶೆಯಲ್ಲಿ ಸೇರಿಸುವ ಮಸೂದೆ ಮಂಡಿಸಿದ ನೇಪಾಳ

35 ವರ್ಷಗಳ ಸೇವಾನುಭವದಲ್ಲಿ ಥಾಮಸ್‌ ಕೇವಲ ಐದು ವರ್ಷಗಳ ಕಾಲ ಖಾಕಿ ಸಮವಸ್ತ್ರ ಧರಿಸಿದ್ದರು. ಉಳಿದಂತೆ ಅವರನ್ನು ಹಲವು ವರ್ಷಗಳ ಕಾಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ನಿಯೋಜಿಸಲಾಗಿತ್ತು. ನಿವೃತ್ತಿ ಸಂದರ್ಭದಲ್ಲಿ ಲೋಹದ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಕೊಡಗಿನಲ್ಲಿ ಅರಣ್ಯಭೂಮಿ ಒತ್ತುವರಿ ಸೇರಿದಂತೆ ಹಲವು ಭ್ರಷ್ಟಾಚಾರ ಆರೋಪಗಳು ಥಾಮಸ್‌ ಅವರ ಮೇಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಇವರನ್ನು ವಿಚಕ್ಷಣಾ ದಳದ ನಿರ್ದೇಶಕರಾಗಿ ನೇಮಿಸಿದ್ದರು. ಈ ಸಂದರ್ಭದಲ್ಲಿ ಹಲವು ಸಚಿವರು, ಐಎಎಸ್‌–ಐಪಿಎಸ್‌ ಅಧಿಕಾರಿಗಳ ವಿರುದ್ಧ ತನಿಖೆಯನ್ನು ಥಾಮಸ್‌ ಆರಂಭಿಸಿದ್ದರು. ನಂತರದಲ್ಲಿ ಈ ಹುದ್ದೆಯಿಂದ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸರ್ಕಾರವನ್ನೇ ಟೀಕಿಸಿದ್ದಕ್ಕೆ ಮತ್ತು ಸರ್ಕಾರದ ಅನುಮತಿ ಇಲ್ಲದೆ ಸೇವಾನುಭವದ ಬಗ್ಗೆ ಪುಸ್ತಕ ಬರೆದಿದಕ್ಕಾಗಿ ಥಾಮಸ್‌ ಅವರನ್ನು ಎರಡು ವರ್ಷ ಅಮಾನತುಗೊಳಿಸಲಾಗಿತ್ತು.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು