ತಿರುವನಂತಪುರ: ಮಕರಸಂಕ್ರಾತಿ ದಿನದಂದು ಕೇರಳ ಪ್ರವಾಸೋದ್ಯಮ ಇಲಾಖೆಯು ದನದ ಮಾಂಸದ ಖಾದ್ಯದ ಕುರಿತು ಮಾಡಿದ್ದ ಟ್ವೀಟ್ ಟೀಕೆಗೆ ಗುರಿಯಾಗಿದ್ದು, ಇದಕ್ಕೆ ಸ್ಪಷ್ಟನೆ ನೀಡಿರುವ ಸರ್ಕಾರ, ‘ಯಾರ ಧಾರ್ಮಿಕ ಭಾವನೆಗಳಿಗೂ ನೋವು ಉಂಟು ಮಾಡುವ ಉದ್ದೇಶ ಇರಲಿಲ್ಲ’ ಎಂದಿದೆ.

‘ಕೇರಳದ ಕಮ್ಯುನಿಸ್ಟ್ ಸರ್ಕಾರವು ಅಲ್ಲಿನ ಹಿಂದೂಗಳ ವಿರುದ್ಧ ಸಮರ ಸಾರಿದೆ’ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಈ ವಿಚಾರವಾಗಿ ಟ್ವೀಟ್ ಮಾಡಿದ್ದರು.

ಟ್ವೀಟ್ಗೆ ಕೋಮುವಾದದ ಬಣ್ಣ ಹಚ್ಚಲು ಯತ್ನಿಸಲಾಗುತ್ತಿದೆ ಎಂದಿರುವ ಕೇರಳ ಪ್ರವಾಸೋದ್ಯಮ ಇಲಾಖೆ ಸಚಿವ ಕಡಗಂಪಳ್ಳಿ ಸುರೇಂದ್ರನ್, ‘ರಾಜ್ಯದಲ್ಲಿ ಆಹಾರಕ್ಕೂ ಧರ್ಮಕ್ಕೂರಾಜಕೀಯ ನಂಟು ಕಲ್ಪಿಸುವುದಿಲ್ಲ’ ಎಂದಿದ್ದಾರೆ. ದನದ ಮಾಂಸದ ಖಾದ್ಯದ ರೆಸಿಪಿಯ ಲಿಂಕ್ ಜೊತೆ ಪ್ರವಾಸೋದ್ಯಮ ಇಲಾಖೆ ಮಾಡಿದ್ದ ಟ್ವೀಟ್ಗೆ ಆಕ್ಷೇಪ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.