ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭಮೇಳ: ಪ್ರಯಾಗರಾಜ್ ಜಗಮಗ

Last Updated 10 ಜನವರಿ 2019, 20:15 IST
ಅಕ್ಷರ ಗಾತ್ರ

ಮಕರ ಸಂಕ್ರಾಂತಿಯಂದು ಆರಂಭವಾಗಲಿರುವ ಅರ್ಧ ಕುಂಭಮೇಳಕ್ಕೆ ಪ್ರಯಾಗರಾಜ್ ಸಿದ್ಧವಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಬರುವ ಸಾಧು–ಸಂತರು, ಭಕ್ತರಿಗೆ ವಸತಿ ಮತ್ತು ಮೂಲಸೌಕರ್ಯ ಕಲ್ಪಿಸಲು ಕುಂಭಮೇಳ ಕ್ಷೇತ್ರದಲ್ಲಿ ತಾತ್ಕಾಲಿಕ ನಗರಿಯನ್ನು ನಿರ್ಮಿಸಲಾಗಿದೆ.

ಇದು ವಿಶ್ವದ ಅತ್ಯಂತ ದೊಡ್ಡ ತಾತ್ಕಾಲಿಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಕ್ಷಯವಟ:ಪುರಾಣ ಕಾಲದ ಆಲದಮರ ಎಂದು ನಂಬಲಾಗಿದೆ. 450 ವರ್ಷಗಳಿಂದ ಈ ಮರ ಇರುವ ಸ್ಥಳಕ್ಕೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದೆ. ಈ ಭಾರಿಯ ಕುಂಭಮೇಳದ ವೇಳೆ ಈ ಮರದ ಹತ್ತಿರ ಹೋಗಲು ಅವಕಾಶ ನೀಡಲಾಗಿದೆ

ತೇಲು ಸೇತುವೆಗಳು
ಕುಂಭಮೇಳ ಕ್ಷೇತ್ರವು ಗಂಗಾನದಿಯ ಎರಡೂ ದಂಡೆಗಳಲ್ಲಿ ವ್ಯಾಪಿಸಿದೆ. ಎರಡೂ ದಂಡೆಗಳ ನಡುವೆ ಭಕ್ತರ ಓಡಾಟಕ್ಕೆ ಅನುಕೂಲವಾಗಲು ತಾತ್ಕಾಲಿಕ ತೇಲು ಸೇತುವೆಗಳನ್ನು ನಿರ್ಮಿಸಲಾಗಿದೆ.

ತ್ರಿವೇಣಿ ಸಂಗಮ
ಗಂಗಾ–ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿಗಳ ಸಂಗಮದ ಕ್ಷೇತ್ರ. ತ್ರಿವೇಣಿ ಸಂಗಮದ ಸುತ್ತಲಿನ ದಂಡೆಯಲ್ಲೇ ಭಕ್ತರು ಪವಿತ್ರ ಸ್ನಾನ ಮಾಡುತ್ತಾರೆ. ಲಕ್ಷಾಂತರ ಜನರಿಗೆ ಅನುಕೂಲವಾಗಲಿ ಎಂದು ಸಂಗಮದ ಸುತ್ತಲೂ ಹಲವೆಡೆ ತಾತ್ಕಾಲಿಕ ಸ್ನಾನಘಟ್ಟಗಳನ್ನು ನಿರ್ಮಿಸಲಾಗಿದೆ.

ಹಾಟ್‌ಸ್ಪಾಟ್
ಅಂತರ್ಜಾಲ ಸೇವೆ ಒದಗಿಸುವ ಉದ್ದೇಶದಿಂದ ಕುಂಭಮೇಳ ಕ್ಷೇತ್ರದಲ್ಲಿ 4,000 ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲಾಗಿದೆ.

ಅಮೃತವುಕ್ಕುವ ವೇಳೆ ಪವಿತ್ರ ಸ್ನಾನ
‘ಸಮುದ್ರಮಥನದ ನಂತರ ದೊರಕಿದ ಅಮೃತವನ್ನು ಮೋಹಿನಿ ಅವತಾರದಲ್ಲಿ ವಿಷ್ಣು ಕೊಂಡೊಯ್ಯುತ್ತಾನೆ. ಹಾಗೆ ಅಮೃತವನ್ನು ಸಾಗಿಸುವಾಗ ಆ ಕುಂಭದಿಂದ ನಾಲ್ಕು ಹನಿ ಅಮೃತ ಭೂಮಿಗೆ ಬೀಳುತ್ತದೆ. ಒಂದು ಹನಿ ಅಮೃತವು ಪ್ರಯಾಗರಾಜ್‌ನಲ್ಲೂ ಬೀಳುತ್ತದೆ’ ಎಂದು ಪುರಾಣ ಹೇಳುತ್ತದೆ.ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಇಲ್ಲಿ ಅಮೃತ ಉಕ್ಕುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಆರು ವರ್ಷಕ್ಕೊಮ್ಮೆ ಅರ್ಧಕುಂಭಮೇಳ ನಡೆಯುತ್ತದೆ. ಈಗ ನಡೆಯಲಿರುವುದೂ ಅರ್ಧಕುಂಭಮೇಳ.

ಸಾರಿಗೆ
ಕುಂಭಮೇಳಕ್ಕೆಂದೇ ವಿವಿಧ ಮಾರ್ಗಗಗಳಲ್ಲಿ ಪ್ರಯಾಗರಾಜ್‌ಗೆ 800 ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಹರಿಯಾಣ, ಬಿಹಾರ, ಮಧ್ಯಪ್ರದೇಶಗಳಿಂದ 5,000ಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತದೆ. ಕುಂಭಮೇಳ ಕ್ಷೇತ್ರದಲ್ಲಿ 5 ಲಕ್ಷ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಆಧಾರ: ಕುಂಭಮೇಳ 2019 ಅಧಿಕೃತ ಜಾಲತಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT