ಭಾನುವಾರ, ಸೆಪ್ಟೆಂಬರ್ 26, 2021
21 °C

ಹಿಂದಿ ಸಿನಿಮಾದಲ್ಲಿ ನಟಿಸಲಿರುವ ಲಾಲು ಪುತ್ರ ತೇಜ್‌ಪ್ರತಾಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರದ ಮಾಜಿ ಸಚಿವ ಹಾಗೂ ಆರ್‌ಜೆಡಿ ಪಕ್ಷದ ಶಾಸಕ ತೇಜ್‌ಪ್ರತಾಪ್‌ ಯಾದವ್‌ ಅವರು ಹಿಂದಿ ಸಿನಿಮಾ ‘ರುದ್ರಾ ದಿ ಅವಾತಾರ್‌’ ಸಿನಿಮಾದಲ್ಲಿ ನಟಿಸಲಿದ್ದಾರೆ.

ಈ ಹಿಂದೆ ಭೋಜ್‌ಪುರಿ ಸಿನಿಮಾದಲ್ಲಿ ನಟಿಸಿದ್ದ ತೇಜ್‌ಪ್ರತಾಪ್‌ ಅವರು ಹೊಸ ಸಿನಿಮಾದ ಪೋಸ್ಟರ್‌ ಅನ್ನು ಇನ್‌ಸ್ಟಾಗ್ರಾಮ್‌, ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಟೀ ಶರ್ಟ್‌, ಸನ್‌ಗ್ಲಾಸ್‌, ಜೀನ್ಸ್‌ ಧರಿಸಿ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದು, ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ’ ಎಂದು ತಿಳಿಸಿದ್ದಾರೆ.

ಸಿನಿಮಾದಲ್ಲಿರುವ ಇತರ ನಟ, ನಟಿಯರು, ಸಿನಿಮಾ ನಿರ್ಮಾಣ ಸಂಸ್ಥೆ, ಇನ್ನಿತರ ಮಾಹಿತಿ ಕುರಿತಂತೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು