ಮುಂಬೈ: ಇತ್ತೀಚೆಗಷ್ಟೇ 90 ವರ್ಷಕ್ಕೆ ಕಾಲಿಟ್ಟ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು, ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖಾತೆ ತೆರೆದಿದ್ದಾರೆ.

ಸೋಮವಾರ ರಾತ್ರಿ ತಮ್ಮ ಫೋಟೊ ಮತ್ತು ವಿಡಿಯೊವೊಂದನ್ನು ಹಂಚಿಕೊಂಡಿರುವ ಲತಾ ಅವರು, ಟ್ವಿಟರ್ ಮೂಲಕ ಮೊದಲ ಬಾರಿಗೆ ಟ್ವೀಟ್ ಮಾಡಿ ಇನ್‌ಸ್ಟಾಗ್ರಾಂ ಲಿಂಕ್‌ಅನ್ನು ಹಂಚಿಕೊಂಡರು.

‘ನಮಸ್ಕಾರ. ಇಂದು ಮೊದಲ ಬಾರಿಗೆ ಇನ್‌ಸ್ಟಾಗ್ರಾಂನಲ್ಲಿ ನಂಟು ಬೆಸೆಯುತ್ತಿರುವೆ’ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ತಂಗಿ ಮೀನಾ ಖಾದಿಕರ್ ಬರೆದಿರುವ ‘ದೀದಿ ಔರ್ ಮೇ’ ಶೀರ್ಷಿಕೆಯ ಆತ್ಮಚರಿತ್ರೆ ಪುಸ್ತಕವನ್ನು ಹಿಡಿದುಕೊಂಡಿರುವ ಫೋಟೊವನ್ನು ಲತಾ ಹಂಚಿಕೊಂಡಿದ್ದಾರೆ. ಈ ಪುಸ್ತಕ ಸೆ. 29ರಂದು ಬಿಡುಗಡೆಯಾಗಿದೆ.

ಸಹೋದರಿಯರಾದ ಮೀನಾ ಮತ್ತು ಉಷಾ ಮಂಗೇಶ್ಕರ್, ಲತಾ ಅವರ ಆತ್ಮಚರಿತ್ರೆ ಪುಸ್ತಕ ಹಿಡಿದುಕೊಂಡಿರುವ ಮತ್ತೊಂದು ಚಿತ್ರವನ್ನೂ ಅವರು ಹಂಚಿಕೊಂಡಿದ್ದು, ‘ನಿನ್ನೆ ನನ್ನ ಕಿರಿಯ ತಂಗಿ ಮೀನಾ ಖಾದಿಕರ್ ನನಗೆ ಕೃತಿಯ ಮೊದಲ ಪ್ರತಿಯನ್ನು ಕೊಡುಗೆಯಾಗಿ ನೀಡಿದಳು. ಅವಳು ನನ್ನ ಬಗ್ಗೆ ಪುಸ್ತಕ ಬರೆದಿದ್ದಾಳೆ’ ಎಂದು ಪುಟ್ಟ ಒಕ್ಕಣೆಯನ್ನೂ ಅವರು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.