ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ನಡುವೆ ರಸ್ತೆಯಲ್ಲಿ ಗಮನ ಸೆಳೆದ ಪುನುಗು ಬೆಕ್ಕು

Last Updated 28 ಮಾರ್ಚ್ 2020, 3:33 IST
ಅಕ್ಷರ ಗಾತ್ರ

ಕೋಯಿಕ್ಕೋಡ್‌: ಕೊರೊನಾ ಸೋಂಕು ವ್ಯಾಪಕವಾಗದಂತೆ ತಡೆ ಯುವ ಸಲುವಾಗಿ ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿದೆ. ರಸ್ತೆ ಮೇಲೆ ಒಬ್ಬ ವ್ಯಕ್ತಿ ಸಹ ಓಡಾಡದಂತೆ ಪೊಲೀಸರು ಕಣ್ಗಾವಲು ಹಾಕಿ, ಕಾಯುತ್ತಿದ್ದಾರೆ.

ಆದರೆ, ಕೋಯಿಕ್ಕೋಡ್‌ ಬಳಿಯ ಮೆಪ್ಪಯೂರ್‌ ಪಟ್ಟಣದಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಕೆಲ ದಿನಗಳ ಹಿಂದೆ ಕುತೂಹಲವೊಂದು ಕಾದಿತ್ತು. ಜನರಿಲ್ಲದೇ ಬಿಕೊ ಎನ್ನುತ್ತಿದ್ದ ರಸ್ತೆಯಲ್ಲಿ ಪುನುಗುಬೆಕ್ಕೊಂದು (ಸಿವೆಟ್‌) ಝೀಬ್ರಾ ಕ್ರಾಸಿಂಗ್‌ನಲ್ಲಿ ಹೋಗುತ್ತಿತ್ತು.

ಬಹುತೇಕ ನಿರ್ಜನವಾಗಿದ್ದ ರಸ್ತೆಯಲ್ಲಿ ಈ ಮಾರ್ಜಾಲ ನಡೆದುಕೊಂಡು ಹೋಗುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅರಣ್ಯ ಅಧಿಕಾರಿಗಳು, ಪ್ರಾಣಿಪ್ರಿಯರು ಈ ಪುನುಗು ಬೆಕ್ಕು ಕುರಿತಂತೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.‘ಇದು ಪುನುಗು ಬೆಕ್ಕು. ವಿಡಿಯೊ ಸಹ ಅಸಲಿ. ಅದು ಸುಸ್ತಾದಂತೆ ಕಾಣಿಸುತ್ತದಂತೆ. ಯಾರೋ ಅದನ್ನು ಬಂಧನದಲ್ಲಿಟ್ಟು, ಬಿಡುಗಡೆ ಮಾಡಿರುವಂತೆ ತೋರುತ್ತದೆ’ ಎಂದು ಐಎಎಫ್‌ ಅಧಿಕಾರಿ ಪರ್ವೀನ್‌ ಕಾಸ್ವಾನ್‌ ಎಂಬುವವರು ಟ್ವೀಟ್‌ ಮಾಡಿದ್ದು, ಇದನ್ನು ಎನ್‌ಡಿಟಿವಿ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

ರಾತ್ರಿವೇಳೆ ಹೆಚ್ಚು ಚಟುವಟಿಕೆಯಿಂದ ಇರುವ ಇವುಗಳು ಮೈಮೇಲೆ ಕಪ್ಪು ಪಟ್ಟಿಗಳನ್ನು ಹೊಂದಿವೆ.ಇವುಗಳ ಸಂಖ್ಯೆಯೂ ಕಡಿಮೆ. ಈ ಪ್ರಭೇದದ ಪ್ರಾಣಿಗಳು ಹೆಚ್ಚಾಗಿ ಕೇರಳ ಮತ್ತು ಕರ್ನಾಟಕದ ಕರಾವಳಿಯ ಕೆಲ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT