ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ವಿಸ್ತರಣೆ: ಯಾವ ಚಟುವಟಿಕೆಗೆ ಅನುಮತಿ ಇದೆ? ಯಾವುದಕ್ಕೆ ಇಲ್ಲ?

Last Updated 1 ಮೇ 2020, 15:20 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾವೈರಸ್ ಸೋಂಕು ಹರಡುವಿಕೆಯ ವ್ಯಾಪ್ತಿ ಮತ್ತು ಪ್ರಕರಣಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ದೇಶದಾದ್ಯಂತ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಸಿರು ವಲಯಗಳಾಗಿ ವಿಂಗಡಿಸಿದೆ. ಇದೀಗ ಲಾಕ್‌ಡೌನ್ ಅವಧಿ ವಿಸ್ತರಿಸಿರುವುದರಿಂದ ವಲಯದ ಆಧಾರದಲ್ಲಿ ಕೆಲವು ಸಡಿಲಿಕೆ ನೀಡಲಾಗಿದೆ

ಲಾಕ್‍ಡೌನ್ ಅವಧಿಯಲ್ಲಿ ಸಡಿಲಿಕೆ ಏನು? ಯಾವುದಕ್ಕೆ ಅನುಮತಿ ಇದೆ,ಯಾವುದಕ್ಕೆ ಅನುಮತಿ ಇಲ್ಲ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ವಿವರಿಸಿದೆ. ಇದರ ಪ್ರಕಾರ ಎಲ್ಲ ವಲಯಗಳಲ್ಲಿ ಯಾವುದೇ ವ್ಯಕ್ತಿ ಅತ್ಯಗತ್ಯವಲ್ಲದ ಚಟುವಟಿಕೆಗಾಗಿ ಓಡಾಟ ಸಂಜೆ7ರಿಂದ ಬೆಳಗ್ಗೆ 7ರವರೆಗೆ ನಿರ್ಬಂಧಿಸಲಾಗಿದೆ.

ಕೆಂಪು ವಲಯಗಳಲ್ಲಿ ಸೈಕಲ್ ರಿಕ್ಷಾ, ಆಟೋ ರಿಕ್ಷಾ, ಟ್ಯಾಕ್ಸಿ, ಸಲೂನ್ ತೆರೆಯುವಂತಿಲ್ಲ.
ಆದರೆ ಹೊರರೋಗಿ ವಿಭಾಗ (ಒಪಿಡಿ), ಮೆಡಿಕಲ್ ಕ್ಲಿನಿಕ್‌ಗಳು ಅಂತರ ಕಾಯ್ದುಕೊಂಡು ತೆರೆಯಬಹುದು. ಈ ಸೇವೆಗಳಿಗೆ ಎಲ್ಲ ವಲಯದಲ್ಲಿಯೂ ಅನುಮತಿಇದೆ.

ಧಾರ್ಮಿಕ ಕ್ಷೇತ್ರಗಳು ಮತ್ತು ಆರಾಧನಾಲಯಗಳು ತೆರೆಯುವಂತಿಲ್ಲ.ಜನರು ಸೇರುವ ಕಾರ್ಯಕ್ರಮ, ಸಿನಿಮಾ ಹಾಲ್, ಮಾಲ್, ಜಿಮ್, ಸಾಂಸ್ಕೃತಿಕ, ರಾಜಕೀಯ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ. ಹೋಟೆಲ್, ಶೈಕ್ಷಣಿಕ ಸಂಸ್ಥೆಗಳು ತೆರೆಯುವುದಿಲ್ಲ. ಅದೇ ವೇಳೆ ವಿಮಾನಯಾನ, ರೈಲು ಮತ್ತು ರಸ್ತೆ ಸಂಚಾರ ಮಾಡುವುದಾದರೆ ತಕ್ಕ ಕಾರಣವಿರಬೇಕು. ಆ ಕಾರಣಕ್ಕೆ ಗೃಹ ಸಚಿವಾಲಯದ ಅನುಮತಿ ನೀಡಿದರೆ ಮಾತ್ರ ಸಂಚಾರ ಸಾಧ್ಯವಾಗುವುದು.
ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಖಾನೆ, ನಿರ್ಮಾಣ ಕಾರ್ಯ, ಮನರೇಗಾ ಕಾರ್ಯಗಳು, ಆಹಾರ ಸಂಸ್ಕರಣ ಘಟಕಗಳು, ಇಟ್ಟಿಗೆ ಇತರ ವಸ್ತುಗಳ ನಿರ್ಮಾಣ ಘಟಕಗಳು ಕಾರ್ಯವೆಸಗಬಹುದು.
ಎಲ್ಲ ಕೆಂಪು ವಲಯಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲಿಯೂ ಮಿಲಿಟರಿ ನಿಯೋಜಿಸುವ ಅಗತ್ಯ ಬಂದಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಗೃಹ ಸಚಿವಾಲಯದ ಮಾರ್ಗಸೂಚಿಯ 11ನೇ ಪ್ಯಾರಾದಲ್ಲಿ ಕಿತ್ತಳೆ ವಲಯದಲ್ಲಿ ಅನುಮತಿ ನೀಡಿರುವ ಚಟುವಟಿಕೆಗಳ ಬಗ್ಗೆ ಸೂಚಿಸಲಾಗಿದೆ.

ಕಿತ್ತಳೆ ವಲಯದಲ್ಲಿ ಕೆಲವೊಂದು ಸಡಿಲಿಕೆ ಇದ್ದು, ಟ್ಯಾಕ್ಸಿ ಮತ್ತು ಕ್ಯಾಬ್ ಸಂಚಾರವಿರಲಿದೆ. ಕ್ಯಾಬ್‌‌ನಲ್ಲಿ ಒಬ್ಬ ಚಾಲಕ ಮತ್ತು ಒಬ್ಬ ಪ್ರಯಾಣಿಕನಿಗೆ ಮಾತ್ರ ಅವಕಾಶ ಇದೆ. ಅನುಮತಿ ಪಡೆದು ಅಂತರ್ ಜಿಲ್ಲಾ ಸಂಚಾರ ನಡೆಸಬಹುದು.ನಾಲ್ಕು ಚಕ್ರದ ವಾಹನಗಳಲ್ಲಿ ಇಬ್ಬರಿಗೆ ಮಾತ್ರ ಸಂಚರಿಸಲು ಅವಕಾಶವಿದೆ.ದ್ವಿಚಕ್ರ ವಾಹನದಲ್ಲಿ ಹಿಂಬದಿ ಪ್ರಯಾಣಿಕರೂ ಹೋಗಬಹುದು.

ಹಸಿರು ವಲಯದಲ್ಲಿ ಹೆಚ್ಚಿನ ನಿರ್ಬಂಧಗಳೇನೂ ಇರುವುದಿಲ್ಲ, ಶೇ. 50 ಜನರನ್ನು ಮಾತ್ರ ಬಸ್‌ಗಳು ಕರೆದೊಯ್ಯಬಹುದು ಮತ್ತು ಬಸ್ ಡಿಪೊಗಳಲ್ಲಿ ಶೇ.50 ಮಂದಿ ನೌಕರರು ಕೆಲಸ ಮಾಡಬಹುದು. ಮದ್ಯದಂಗಡಿ, ಪಾನ್ ಶಾಪ್‌ಗಳಲ್ಲಿ ಅಂತರ ಕಾಯ್ದುಕೊಂಡು ಕೆಲಸ ಆರಂಭಿಸಬಹುದು. ಒಂದು ಹೊತ್ತಲ್ಲಿ 5 ಜನರಿಗಿಂತ ಹೆಚ್ಚು ಮಂದಿ ಅಂಗಡಿಯೊಳಗೆ ಇರದಂತೆ ಅಂಗಡಿ ಮಾಲೀಕರು ಖಾತರಿಪಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT